(ಕನ್ನಡದ ಪರ್ಲ್ ಬಕ್ ಬಿರುದಾಂಕಿತೆ ಹಿರಿಯ ಕಾದಂಬರಿಗಾರ್ತಿ ಲಲಿತಾ ಆರ್ ರೈ ಅವರಿಗೆ ಅರ್ಪಣೆ)
ಹಿರಿಯ ಚೇತನವಿದು
ಲಲಿತಮ್ಮ ನೀವು
ಆದರ್ಶದ ಗುರಿಯ
ಬಾಳಿದಿರಿ ಎಂದು
ನೂರ್ಕಾಲ ಸುಖವಾಗಿ
ಬಾಳಿರಿ ಎಂದೆಂದೂ
ಆ ದೇವ ಇತ್ತಿಹನು
ಈ ಕಾಯವನ್ನು
ಕಷ್ಟಕಾರ್ಪಣ್ಯಗಳ
ಲೆಕ್ಕಿಸದೇ ನೀವು
ಮುಂದಡಿಯ ಇಡುವಿಕೆ
ಬಾಳಲ್ಲಿ ಛಲವು
ದೇವರೇ ಆತ್ಮವು
ನಂಬಿದ ಬದುಕು
ಬೆಂಕಿಯ ಕುಲುಮೆಗೆ
ಸ್ಫುಟವಿಟ್ಟ ರೀತಿಯು
ಒಲವಿನ ಬಳ್ಳಿಯ
ಕಾಯೊಳಗೆ ರೂಪ
ಘಟಿಸುವುದು ದಿನಾ
ಅವನೆಣಿಕೆಯ ರೀತಿ
ಮಣ್ಣಿನ ಈ ಕಾಯ
ಅತ್ಯಂತ ಶ್ರೇಷ್ಠವು
ಒದಗಿಹುದು ನಿಮಗಿಂದು
ತೊಂಬತ್ತಾರರ ಹರೆಯವು
- ಮಲ್ಲಿಕಾ ಜೆ ಆರ್ ರೈ ಪುತ್ತೂರು
ಅಧ್ಯಕ್ಷರು
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಘಟಕ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ