ಪಚ್ಚನಾಡಿ ಸಂತೋಷ್ ನಗರದಲ್ಲಿ ನೂತನ ಅಂಗನವಾಡಿ ಕಟ್ಟಡದ ಶಿಲಾನ್ಯಾಸ

Upayuktha
0

ಮಂಗಳೂರು: ಗೇಲ್ ಗ್ಯಾಸ್ ಕಂಪೆನಿ ಲಿಮಿಟೆಡ್ ಕಂಪೆನಿಯವರು ಸಿಎಸ್‌ಆರ್ ನಿಧಿಯಡಿ ಸಂತೋಷ್ ನಗರದಲ್ಲಿ ನೂತನ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ ಅನುದಾನ ಒದಗಿಸಿದ್ದು, ಇದರ ಶಿಲಾನ್ಯಾಸ (ಭೂಮಿ ಪೂಜೆ) ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿದ್ದು ಮಂಗಳೂರು ಉತ್ತರ  ಶಾಸಕ ಡಾ ಭರತ್ ಶೆಟ್ಟಿಯವರು ನೆರವೇರಿಸಿದರು.


ಈ ಸಂದರ್ಭ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಕು. ಸುನೀತಾ, ಕಾರ್ಪೊರೇಟರ್ ಸಂಗೀತಾ ಆರ್, ನಾಯಕ್ ಗೇಲ್ ಕಂಪೆನಿಯ ಚೀಫ್ ಮ್ಯಾನೇಜರ್ ಸುಮಿತ್ ಉಪಸ್ಥಿತರಿದ್ದರು.


ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪ್ರಶಾಂತ್ ಪೈ, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೋಂದೆಲ್, ವಾರ್ಡ್ ಅಧ್ಯಕ್ಷರಾದ ಶಿವಾಜಿ ಕುಲಾಲ್, ಬೂತ್ ಅಧ್ಯಕ್ಷರಾದ ಅನಿಲ್ ಕುಮಾರ್, ಸ್ಥಳೀಯರಾದ ವಿಜಯ್ ಶೆಟ್ಟಿ, ಜಗದೀಶ್ ಮುಂಡ ಪೂಜಾರಿ, ತನಿಯಪ್ಪ, ಸಂದೇಶ್ ಪೂಜಾರಿ, ರತೀಶ್, ವಿಜಯ್, ಅಂಗನವಾಡಿ ಶಿಕ್ಷಕಿ ಜ್ಯೋತಿ, ನಿಕಟಪೂರ್ವ ಶಿಕ್ಷಕಿ ಭವಾನಿ ಅಂಚನ್ ಮತ್ತಿತರರು ಸಾಥ್ ನೀಡಿದರು.  ಪಕ್ಷದ ಪ್ರಮುಖರು, ಕಾರ್ಯಕರ್ತರು, ಹಿತೈಷಿಗಳು, ಸ್ಥಳೀಯ ನಿವಾಸಿಗಳು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top