ನಿಟ್ಟೆ: ಕೆನರಾ ಮ್ಯಾರಥಾನ್ ನಲ್ಲಿ ನಿಟ್ಟೆ ವಿದ್ಯಾರ್ಥಿಗಳ ಸಾಧನೆ

Upayuktha
0


ನಿಟ್ಟೆ:
ಆಗಸ್ಟ್ 15 ರಂದು ಮಣಿಪಾಲದಲ್ಲಿ ಕೆನರಾ ಬ್ಯಾಂಕ್ ನಡೆಸಿದ ಪ್ರತಿಷ್ಠಿತ 3 ನೇ ಆವೃತ್ತಿಯ ಕೆನರಾ ಮ್ಯಾರಥಾನ್ ನಲ್ಲಿ ನಿಟ್ಟೆ ಕ್ರೀಡಾಪಟುಗಳು ಹಲವಾರು ಪದಕಗಳು ಮತ್ತು ನಗದು ಬಹುಮಾನವನ್ನು ಗೆದ್ದಿದ್ದಾರೆ. ಡಾ. ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ನಂದಿನಿ ಹಾಫ್ ಮ್ಯಾರಥಾನ್ (ಮುಕ್ತ ವಿಭಾಗ) ನಲ್ಲಿ ಚಿನ್ನದ ಪದಕವನ್ನು ಪಡೆದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ 3 ಕಿ.ಮೀ (ಮುಕ್ತ ವಿಭಾಗ) ನಲ್ಲಿ ಚಿನ್ನದ ಪದಕವನ್ನು ಪಡೆದರು.


 ಡಾ.ಎನ್.ಎಸ್.ಎ.ಎಂ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ದೀಪಿಕಾ 3 ಕಿ.ಮೀ (ಜೂನಿಯರ್ ವಿಭಾಗ) ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರು. ಜೂನಿಯರ್ ವಿಭಾಗದಲ್ಲಿ 9 ನೇ ತರಗತಿಯ ರಕ್ಷಿತ್ ಕಂಚಿನ ಪದಕ ಪಡೆದರು. ಇದರೊಂದಿಗೆ ಕ್ರೀಡಾಪಟುಗಳು ಒಟ್ಟು 27,000 ರೂ.ಗಳ ನಗದು ಬಹುಮಾನವನ್ನು ಗೆದ್ದು ವಿದ್ಯಾಸಂಸ್ಥೆಗೆ ಕೀರ್ತಿ ತಂದಿರುವರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top