ಕಾರ್ಕಳ: ನಿಟ್ಟೆ ರೋಟರಿ ಕ್ಲಬ್ ವತಿಯಿಂದ ಕೆದಿಂಜೆ ವಿದ್ಯಾಬೋಧಿನಿ ಹಿ. ಪ್ರಾ. ಶಾಲೆಗೆ ಸ್ಕೂಲ್ ಸಪೋರ್ಟ್ ಸಿಸ್ಟಮ್ ಅಂಗವಾಗಿ ಕ್ರೀಡಾಸಾಮಗ್ರಿಗಳನ್ನು ಮತ್ತು ನೀರು ಉಳಿಸಿ- ಹಸಿರು ಬೆಳೆಸಿ ಎಂಬ ಧ್ಯೇಯವಾಕ್ಯದೊಂದಿಗೆ ಶಾಲೆಗೆ ಬಣ್ಣದ ಹೂವಿನ ಗಿಡಗಳನ್ನು ಕೂಡಾ ನೀಡಲಾಯಿತು.
ಶಾಲಾ ಸಂಚಾಲಕ ಯು. ಶೇಷಗಿರಿ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೊ ಸತೀಶ್ ಕುಮಾರ್ ಕ್ರೀಡಾ ಸಾಮಗ್ರಿಗಳನ್ನು ಹಸ್ತಾಂತರಿಸಿ, ಕೊಡುಗೆ ನೀಡುವುದು ಮಾತ್ರವಲ್ಲ ತಾವೂ ಕೂಡಾ ಕಲಿತ ಶಾಲೆ, ಕಲಿಸಿದ ಗುರುಗಳನ್ನು ಮರೆಯದೆ ಇದೇ ರೀತಿ ಕೊಡುಗೆ ನೀಡುವಂತಾಗಲೆಂದು ಹಾರೈಸಿದರು. ಶಾಲಾ ಮುಖ್ಯಶಿಕ್ಷಕ ಪೃಥ್ವಿರಾಜ್ ಸ್ವಾಗತಿಸಿದರು. ನಿಟ್ಟೆ ರೋಟರಿ ಕ್ಲಬ್ ನ ಹಿರಿಯ ಸದಸ್ಯ ರೊ.PHF. ತುಕಾರಾಮ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ರೋಟರಿ ಅನ್ ಸರೋಜಿನಿ ತುಕಾರಾಮ ಶೆಟ್ಟಿ, ನಿವೃತ್ತ ಶಿಕ್ಷಕ ಕೆ. ಅನಿಲ್ ಕುಮಾರ್, ಎನ್ ಸುಧಾಕರ ರಾವ್ ಉಪ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಶ್ರೀಮತಿ ರೇಖಾ ಪೈ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ