ಸ್ವಾಮಿ ಜಿತಕಾಮಾನಂದಜೀ ಅವರಿಂದ ವಿಶೇಷ ಪ್ರವಚನ
ಅವರು ನಿಟ್ಟೆಯ ಪ್ರತಿಷ್ಠಿತ ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ (ಎಂ.ಬಿ.ಎ) ಸಂಸ್ಥೆಯ 27ನೇ ಬ್ಯಾಚ್ ಓರಿಯೆಂಟೇಷನ್ ಕಾರ್ಯಕ್ರಮದ ತರಬೇತಿಯಲ್ಲಿ ಪಾಲ್ಗೊಂಡು "ವ್ಯಕ್ತಿತ್ವ ವಿಕಸನದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳ ಸಾರಸಂಗ್ರಹವನ್ನು ವಿಶ್ಲೇಷಿಸಿ" ಎಂ.ಬಿ.ಎ ವಿದ್ಯಾರ್ಥಿಗಳಿಗೆ ವಿಶೇಷ ಪ್ರವಚನ ನೀಡಿದರು.
ಮೌಲ್ಯಯುತ, ತತ್ವಾಧಾರಿತ ಉತ್ಕೃಷ್ಟ ಶಿಸ್ತುಬದ್ಧ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನಿಟ್ಟೆಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಶ್ರೀ ವಿನಯ ಹೆಗ್ಡೆಯವರ ಮಾರ್ಗದರ್ಶನದಲ್ಲಿ ನೀಡುವ ರೀತಿಯನ್ನು ಶ್ಲಾಘಿಸಿದರು. ಪ್ರವಚನದ ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಪ್ರಾಧ್ಯಾಪಕ ಡಾ. ಸುಧೀರ್ ರಾಜ್ ಕೆ ಮತ್ತು ಪ್ರೊ. ಕಾರ್ತಿಕ್ ಕುದ್ರೋಳಿ ನಿರ್ವಹಿಸಿದರು. ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ಸುಧೀರ್ ಎಂ ಅವರು ಸ್ವಾಮೀಜಿಯವರನ್ನು ಗೌರವಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ