ಮಂಗಳೂರು ವಿವಿ: ಪರೀಕ್ಷೆ ಪೂರ್ಣಗೊಂಡ 17 ದಿನಗಳಲ್ಲಿ ಫಲಿತಾಂಶಗಳು ಪ್ರಕಟ

Upayuktha
0


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಜೂನ್/ಜುಲೈ 2024 ರಲ್ಲಿ ನಡೆಸಿದ ಎಲ್ಲಾ ಪದವಿ ಕೋರ್ಸ್‌ಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್‌ನ ಎಲ್ಲಾ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ಮುಗಿಸಿ ಆಗಸ್ಟ್ 17 ರಂದು ಯುಯುಸಿಎಂಎಸ್‌ನ ಅಧಿಕೃತ ವೆಬ್‌ಸೈಟ್ (www.uucms.karnataka.gov.in) ಮೂಲಕ ಫಲಿತಾಂಶ ಪ್ರಕಟಿಸಿದೆ. 


ಜೂನ್‌ 24ರಂದು ಆರಂಭವಾಗಿ ಜುಲೈ 31ರಂದು ಮುಗಿದ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ಜುಲೈ 22 ರಂದು ಆರಂಭವಾಗಿ ಆಗಸ್ಟ್‌ 14 ರಂದು ಮುಕ್ತಾಯವಾಗಿದೆ. ಮೌಲ್ಯಮಾಪನ ಪೂರ್ಣಗೊಳಿಸಿದ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಎಸ್‌.ಡಬ್ಲ್ಯು, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್ಸಿ(ಎಫ್ಎನ್ಡಿ)/ಬಿ.ಎಸ್ಸಿ(ಅನಿಮೇಶನ್ ಮತ್ತು ವಿಜುವಲ್  ಇಫೆಕ್ಟ್ಸ್/ಬಿ.ಎಸ್ಸಿ (ಫುಡ್ ಟೆಕ್ನಾಲಾಜಿ), ಬಿ.ಎಸ್ಸಿ(ಹೊಂಸೈನ್ಸ್), ಬಿ.ಎ (ಹೆಚ್ಆರ್‍‌ಡಿ)/ಬಿ.ಎಸ್ಸಿ (ಫ್ಯಾಶನ್ ಡಿಸೈನ್)/ಬಿ.ಎಸ್ಸಿ (ಐಡಿ&ಡಿ)/ಬಿ.ವಿ.ಎ ಕಾರ್ಯಕ್ರಮಗಳ ಫಲಿತಾಂಶ ಪ್ರಕಟಿಸಲಾಗಿದೆ.


ಫಲಿತಾಂಶ ಪ್ರಕಟಿಸಲಾದ ಪ್ರೋಗ್ರಾಂಗಳ ಪಟ್ಟಿಯನ್ನು ಲಗತ್ತಿಸಲಾಗಿದೆ. ಉಳಿದಂತೆ ಎಲ್ಲಾ ಪದವಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ಗಳ  ಹಾಗೂ ಬಿ.ಹೆಚ್.ಎಂ, ಬಿ.ಎಸ್ಸಿ(ಹೆಚ್ಎಸ್) ಮತ್ತು ಬಿ.ಎ(ಎಸ್ಎಲ್ಪಿ) ಹಾಗೂ ಎನ್ಇಪಿ ಹೊರತಾದ ಕಾರ್ಯಕ್ರಮಗಳ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರದಲ್ಲಿ  ಪ್ರಕಟಿಸಲಾಗುವುದು, ಎಂದು ವಿಶ್ವವಿದ್ಯಾನಿಲಯ ತಿಳಿಸಿದೆ. 


ಮಂಗಳೂರು ವಿಶ್ವವಿದ್ಯಾನಿಲಯ ಈ ಬಾರಿ ಮೌಲ್ಯಮಾಪನವನ್ನು ಕೇಂದ್ರೀಕರಣಗೊಳಿಸಿ ದಾಖಲಿಸುವ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಸಂಪೂರ್ಣ ಗಣಕೀಕರಣಗೊಳಿಸಿದ್ದರಿಂದ ಮೌಲ್ಯಮಾಪನ ಮುಗಿದ ಮೂರು ದಿನಗಳಲ್ಲಿಯೇ ಮತ್ತು ಪರೀಕ್ಷೆಗಳು ಪೂರ್ಣಗೊಂಡ 17 ದಿನಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಲು ಸಾಧ್ಯವಾಗಿದೆ, ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ. ಹೆಚ್. ದೇವೇಂದ್ರಪ್ಪ ಅವರ ಪ್ರಕಟಣೆ ತಿಳಿಸಿದೆ. 


ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ, ಕುಲಸಚಿವ (ಮೌಲ್ಯಮಾಪನ) ಪ್ರೊ. ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪ್ರೊ. ವೈ. ಸಂಗಪ್ಪ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಪ್ರೊ.ಜಯಶಂಕರ್‌, ಸಹಾಯಕ ಕುಲಸಚಿವರಾದ  ಹೇಮಲತಾ ಎಂ., ಯಶೋದಾ ಎಂ, ಸಿಸ್ಟಮ್ ಅನಾಲಿಸ್ಟ್ ಮನೋಹರ್ ಜಿ ಮತ್ತು ಇತರ ಸಿಬ್ಬಂದಿ ಫಲಿತಾಂಶ ಘೋಷಣೆಯ ವೇಳೆ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top