ಕಾವೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲ ಇದರ ವತಿಯಿಂದ ಸದಸ್ಯತಾ ಅಭಿಯಾನ ಕಾರ್ಯಾಗಾರವು ಆ.30ರಂದು ಶುಕ್ರವಾರ ಕಾವೂರು ವ್ಯವಸಾಯ ಸೊಸೈಟಿ ಸಭಾಭವನದಲ್ಲಿ ಸದಸ್ಯತಾ ಅಭಿಯಾನ ಕಾರ್ಯಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ಬಿಜೆಪಿಯನ್ನು ಬಲಿಷ್ಟಗೊಳಿಸಲು ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಸದಸ್ಯತಾ ಅಭಿಯಾನದ ಮಾಹಿತಿ ಪಡೆದು ತಮ್ಮ ತಮ್ಮ ಬೂತ್‌ಗಳಲ್ಲಿ ಅತೀ ಹೆಚ್ಚು ಸದಸ್ಯರನ್ನು ನೋಂದಾಯಿಸಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದರು.
ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಪಕ್ಷದ ಪ್ರಮುಖರಾದ ಕಸ್ತೂರಿ ಪಂಜ, ಸಂದೀಪ್ ಪಚ್ಚನಾಡಿ, ರಣದೀಪ್ ಕಾಂಚನ್, ಪೂಜಾ ಪೈ, ಪ್ರಸಾದ್ ಎಡಪದವು, ಅಮರೇಶ್ ಬೇಕಲ್, ಅಮೃತ್ ಲಾಲ್ ಡಿಸೋಜಾ, ಸದಸ್ಯತ್ವ ಅಭಿಯಾನ ಪ್ರಮುಖರಾದ ರಾಜ್ ಗೋಪಾಲ್ ರೈ, ಅರುಣ್ ಶೇಟ್, ಭಾಸ್ಕರ್ ಚಂದ್ರ ಶೆಟ್ಟಿ,ರೂಪ ಡಿ ಬಂಗೇರ, ಹರಿಕೃಷ್ಣ ಬಂಟ್ವಾಳ, ವಸಂತ್ ಜೆ ಪೂಜಾರಿ, ಲೋಹಿತ್ ಆಮೀನ್, ಪುಷ್ಪರಾಜ್ ಮುಕ್ಕ, ಪಕ್ಷದ ಅನ್ಯೋನ್ಯ ಜವಾಬ್ದಾರಿ ಹೊಂದಿರುವ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ