ಮಂಗಳೂರು ಉತ್ತರ: ನೆರೆಪೀಡಿತ ಪ್ರದೇಶಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಭೇಟಿ

Upayuktha
0

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೆರೆ ಉಂಟಾದ ವಿವಿಧ ಪ್ರದೇಶಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಅವರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.


ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದ್ಯಪಾಡಿ ಗ್ರಾಮದ ಕುದ್ರು (ಮುಗೇರ್) ಮತ್ತು ದೈವಂಗಲ ಗುಡ್ಡೆ ಭಾಗವು ನೆರೆಯಿಂದ ಆವೃತವಾಗಿದೆ. 

ಸುಮಾರು 25 ಮನೆ, 15 ಹಸುಗಳು ಸಿಲುಕಿಕೊಂಡಿದ್ದು ಶಾಸಕ ಡಾ.ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ಎಸ್‌ಡಿಆರ್ ಎಫ್ ತಂಡವು ಸ್ಥಳಕ್ಕೆ ಬಂದಿದ್ದು ಸುರಕ್ಷತೆಯ ಕ್ರಮ ಕೈಗೊಳ್ಳಲಾಗಿದೆ.


ಪಂಚಾಯತ್ ವತಿಯಿಂದ ಎಲ್ಲಾ ತಕ್ಷಣದ ವ್ಯವಸ್ಥೆ ಮಾಡಲಾಗುತ್ತಿದೆ. ಡಾ.ಭರತ್ ಶೆಟ್ಟಿ ವೈ ಅವರು ದೋಣಿ ಮೂಲಕವೇ ಸಂಚರಿಸಿ ನದಿ ಒಳಹರಿವಿನ ಪ್ರಮಾಣ ಹೆಚ್ಚುತ್ತಿದ್ದು,ಸ್ಥಳಾಂತರ ಮಾಡುವಂತೆ ಮನೆಯವರಲ್ಲಿ ಮನವಿ ಮಾಡಿದರು.


ಮನೆಯಲ್ಲಿನ ಹಸು, ಪ್ರಾಣಿಗಳನ್ನು ತೊರೆದು ಹೋಗಲು ಹಲವು ಮಂದಿ ನಿರಾಕರಿಸಿದರಾದರೂ‌, ನದಿ ನೀರಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಿ ಮನವೊಲಿಸಲಾಯಿತು. ಜಿಲ್ಲಾ ಪಂಚಾಯತ್ ವತಿಯಿಂದ ದನಕರುಗಳ ಸುರಕ್ಷತೆಗೂ ಕ್ರಮ ಕೈಗೊಳ್ಳಲಾಯಿತು.


ಸಹಾಯಕ ಆಯುಕ್ತ ಹರ್ಷವರ್ಧನ, ತಹಶೀಲ್ದಾರ್, ಕಂದಾಯ, ಗ್ರಾಮ ಪಂಚಾಯತ್ ಅಧಿಕಾರಿಗಳು ಶಾಸಕರ ಜತೆಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top