ಮಾಂಡೋವಿ ಮೋಟರ್ಸ್ ಹಂಪನಕಟ್ಟೆ: ಆ.11ರಂದು 'ಆಟಿದ ವನಸ್' ವಿಶೇಷ ಕಾರ್ಯಕ್ರಮ

Upayuktha
0


ಮಂಗಳೂರು: ಮಂಗಳೂರಿನ ಹೆಸರಾಂತ ಮಾರುತಿ ಸುಝುಕಿ ಕಾರುಗಳ ಡೀಲರ್ ಮಾಂಡೋವಿ ಮೋಟರ್ಸ್ ಆ.11ರಂದು ಭಾನುವಾರ 'ಆಟಿದ ವನಸ್' ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.


ಈ ಕಾರ್ಯಕ್ರಮದಲ್ಲಿ ತುಳುನಾಡಿನ ಆಷಾಢ ಮಾಸದ ವಿಶೇಷ ಆಚರಣೆಗಳ ಜತೆಗೆ 21ಕ್ಕೂ ಹೆಚ್ಚು ಬಗೆಯ ಸಾಂಪ್ರದಾಯಿಕ ವಿಶೇಷ ಖಾದ್ಯಗಳೊಂದಿಗೆ ಭೋಜನವಿರಲಿದೆ.


ರಾಗಿ ಹಾಲು, ಉಪ್ಪಿನಕಾಯಿ, ಕೋಸಂಬರಿ, ಚಟ್ನಿ, ತೆಕ್ಕರೆ ಪಚ್ಚೋಡಿ (ಮುಳ್ಳುಸೌತೆ ಚಟ್ನಿ), ತಿಮರೆ (ಒಂದೆಲಗ) ಚಟ್ನಿ, ಪತ್ರೊಡೆ, ಮಂಜಲ್ ಇರೆತ ಗಟ್ಟಿ (ಅರಸಿನ ಎಲೆಯಲ್ಲಿ ಬೇಯಿಸಿದ ಕಡುಬು), ಹುರುಳಿ ಸಾರು, ಹಲಸಿನ ಹಪ್ಪಳ, ಕಣಿಲೆ ಸುಕ್ಕ, ಮರ್ವಲೆ ಇರೆ ಪೋಡಿ, ತೊಜಂಕ್ ಅಂಬಡೆ, ಕೊಲೊಕೇಸಿಯಾ ಪಲ್ಯ, ಕೊಟ್ಟಿಗೆ, ಹಲಸಿನ ಖಾರದ ಪಲ್ಯ, ಅನ್ನ, ಸಾಂಬಾರ್, ಕೋಕಂ ಕಡಿ, ಹಲಸಿನ ಹಣ್ಣಿನ ಪಾಯಸಗಳು ಈ "ಆಟಿದ ವನಸ್' ಭೋಜನ ಕೂಟದಲ್ಲಿ ಇರಲಿದೆ.


ಆಟಿ ವನಸ್ದ Menu ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ: +91 98457 41239/  +91 98803 46077/ +91 99720 72084


ಇವೆಲ್ಲದರ ಜತೆಗೆ ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳು ಮಧ್ಯಾಹ್ನ 12:30ರಿಂದ 3:00 ಗಂಟೆಯ ವರೆಗೆ ನಡೆಯುತ್ತವೆ.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top