"ಮಕ್ಕಳ ಧ್ವನಿ" ಕಾರ್ಡ್‌ ಕಥೆ, ಕವನ ಗೋಷ್ಠಿಗೆ ಆಹ್ವಾನ

Chandrashekhara Kulamarva
0


ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ(ರಿ)ವು ಪ್ರತಿ ವರ್ಷವೂ ಆಯೋಜಿಸುತ್ತಾ ಬಂದಿರುವ ಮಕ್ಕಳ ಸಾಹಿತ್ಯಕ, ಸಾಂಸ್ಕೃತಿಕ ಹಬ್ಬ 'ಮಕ್ಕಳ ಧ್ವನಿ'. 2023-24ನೇ ಸಾಲಿನ ಮಕ್ಕಳ ಧ್ವನಿ ಕಾರ್ಯಕ್ರಮವು 2024 ಸೆಪ್ಟಂಬರ್‌ ತಿಂಗಳಿನ ಎರಡನೇ ವಾರ, ಸುರತ್ಕಲ್‌ನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಇದರ ಅಂಗವಾಗಿ 'ಕಾರ್ಡ್‌ಕಥೆ ಹಾಗೂ ಕವನ ಗೋಷ್ಠಿ'ಯನ್ನು ಆಯೋಜಿಸಲಾಗಿದೆ.


ಪ್ರಾಥಮಿಕದಿಂದ ಪದವಿಪೂರ್ವ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಇದರಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ಅಂಚೆ ಕಾರ್ಡ್‌ ನಲ್ಲಿ ಕಥೆ ಅಥವಾ ಕವನಗಳನ್ನು ಬರೆದು ಕಳುಹಿಸಬಹುದು. ಕಥೆ, ಕವನಗಳು ಸ್ವತಂತ್ರ, ಸ್ವರಚಿತ ಆಗಿರಬೇಕು ಹಾಗೂ ಅಂಚೆ ಕಾರ್ಡ್‌ನಲ್ಲಿಯೇ ಬರೆದಿರಬೇಕು. ತಮ್ಮ ಕಥೆ, ಕವನಗಳನ್ನು ಕೆಳಗಿನ ವಿಳಾಸಕ್ಕೆ ದಿನಾಂಕ 20/08/2024ರ ಮೊದಲು ತಲಪುವಂತೆ ಕಳುಹಿಸಬಹುದು.


ಪ್ರೊ. ರಮೇಶ ಭಟ್‌ ಎಸ್.ಜಿ.     

ಕಾರ್ಯದರ್ಶಿ, ಮಕ್ಕಳ ಸಾಹಿತ್ಯ ಸಂಗಮ

ʼಶ್ರೀನಿಕೇತನ”, 1-194/(1)

ಎನ್‌.ಎಮ್‌.ಪಿ.ಟಿ.ಕಾಲನಿಯ ಹಿಂಬದಿ

ಕಡಂಬೋಡಿ, ಹೊಸಬೆಟ್ಟು

ಕುಳಾಯಿ ಅಂಚೆ, ಸುರತ್ಕಲ್‌ 575 019

ಸಂಪರ್ಕ: 9449452356



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top