ಬಳ್ಳಾರಿ ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ಪಣ

Upayuktha
0

 ಅಂಗಡಿಯ ಮುಂದೆ ಅವಶ್ಯಕತೆಗೆ ತಕ್ಕಂತೆ ಕನಿಷ್ಠ 50 ಲೀಟರ್ ಅಳತೆಯ ಡಸ್ಟ್ ಬಿನ್ಸ್ ಅಥವಾ ಕಸದ ಬುಟ್ಟಿಗಳನ್ನು ಕಡ್ಡಾಯವಾಗಿರಿಸಬೇಕು-ಮೇಯರ್ ಮುಲ್ಲಂಗಿ ನಂದೀಶ್


ಬಳ್ಳಾರಿ:
ಬಳ್ಳಾರಿ ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ಬಳ್ಳಾರಿ ಮಹಾನಗರ ಪಾಲಿಕೆ ಪಣತೊಟ್ಟಿದ್ದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಎಲ್ಲಾ ವಾಣಿಜ್ಯ ಪ್ರದೇಶಗಳಲ್ಲಿ ತ್ಯಾಜ್ಯ ಚೆಲ್ಲುವುದನ್ನು ನಿಯಂತ್ರಿಸುವುದು ಅತ್ಯವಶ್ಯಕವಾಗಿರುತ್ತದೆ ಇದರ ಅಂಗವಾಗಿ ಎಲ್ಲಾ ವಾಣಿಜ್ಯ ಉದ್ದಿಮೆಗಳು, ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳು ಮತ್ತು ಬೀದಿ ಬದಿ ವ್ಯಾಪಾರಸ್ಥರು, ತರಕಾರಿ, ಹೂವು ಹಣ್ಣು ವ್ಯಾಪಾರಸ್ಥರು ತಮ್ಮ ಅಂಗಡಿಯ ಮುಂದೆ ಅವಶ್ಯಕತೆಗೆ ತಕ್ಕಂತೆ ಕನಿಷ್ಠ 50 ಲೀಟರ್ಅ ಳತೆಯ ಡಸ್ಟ್ ಬಿನ್ಸ್ ಅಥವಾ ಕಸದ ಬುಟ್ಟಿಗಳನ್ನು ಕಡ್ಡಾಯವಾಗಿ ಇರಿಸಲು ಈ ಮೂಲಕ ಎಲ್ಲರಿಗೂ ಸೂಚಿಸಲಾಗುತ್ತಿದೆ. 


ಜುಲೈ 10ನೇ ತಾರೀಖಿನವರೆಗೆ ಗಡುವು ನೀಡಲಾಗಿದ್ದು ನಂತರ ಯಾವುದೇ ಅಂಗಡಿಗಳು ಡಸ್ಟ್ಬಿನ್ ಇಲ್ಲದೆ ಇದ್ದಲ್ಲಿ ಅವುಗಳಿಗೆ ದಂಡ ವಿಧಿಸಲಾಗುವುದು. ಅಲ್ಲದೆ ನಗರದ ಸ್ವಚ್ಛತೆ ಕಾಪಾಡುವಲ್ಲಿ ಎಲ್ಲಾ ವಾಣಿಜ್ಯ ಪ್ರದೇಶಗಳಲ್ಲಿ ಕಸವನ್ನು ಸಂಗ್ರಹಿಸಲು ಪಾಲಿಕೆಯಿಂದ ಈಗಾಗಲೇ ದಿನಕ್ಕೆ ಎರಡು ಬಾರಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದ್ದು ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನ ಪಾಲಿಕೆ ವಾಹನಕ್ಕೆ ನೀಡಲ ತಮಗೆ ವಿನಂತಿಸಿಕೊಳ್ಳಲಾಗಿದೆ.


ಅಲ್ಲದೆ ತಮ್ಮ ಅಂಗಡಿಯ ಮುಂದೆ ಬಿದ್ದಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ನಗರದ ವಾತಾವರಣವನ್ನು ಸ್ವಚ್ಛವಾಗಿಡುವಲ್ಲಿ ಸಹಕರಿಸಲು ಕೋರಲಾಗಿದೆ. ಮುಂದುವರೆದು ಯಾರಾದರೂ ತಮ್ಮ ಅಂಗಡಿಯ ಮುಂದೆ ಅಥವಾ ಅಕ್ಕಪಕ್ಕದಲ್ಲಿ ತ್ಯಾಜ್ಯವನ್ನು ಚೆಲ್ಲುವುದು ಕಂಡು ಬಂದಲ್ಲಿ ನಿಯಮಾನುಸಾರ ಆಯಾ ಅಂಗಡಿ ಮಾಲೀಕರಿಗೆ ರೂಪಾಯಿ 500 ರಿಂದ 1000/- ವರೆಗೆ ದಂಡವನ್ನು ವಿಧಿಸಲಾಗುವುದು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಎಲ್ಲಾ ವಾಣಿಜ್ಯ ಉದ್ದಿಮೆಗಳು, ಕಿರಾಣಿ ಅಂಗಡಿ, ಬೇಕರಿ, ತರಕಾರಿ ವ್ಯಾಪಾರಸ್ಥರು , ಹೂವು ಹಣ್ಣು ವ್ಯಾಪಾರಸ್ಥರು, ರೆಸ್ಟೋರೆಂಟ್ಗಳು ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ಈ ಮೂಲಕ ಸೂಚಿಸಿದೆ. 


ಈ ನಿಟ್ಟಿನಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾದಲ್ಲಿ ನಿಯಮಾನುಸಾರ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.ನಮ್ಮ ಬಳ್ಳಾರಿ ನಗರವನ್ನ ಸ್ವಚ್ಛ ಸುಂದರ ಮತ್ತು ಪರಿಸರಸ್ನೇಹಿ ವಾತಾವರಣಯುಕ್ತ ನಗರವನ್ನಾಗಿಸಲು ಎಲ್ಲಾ ನಾಗರೀಕರಲ್ಲಿ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top