ಉಜಿರೆ: ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಅಧ್ಯಾಪಕರ ಪಾತ್ರವು ಮಹತ್ವವಾಗಿದೆ. ವಿದ್ಯಾರ್ಥಿಗಳಿಗೆ ಪುಸ್ತಕದ ವಿದ್ಯಾಭ್ಯಾಸದ ಜೊತೆಗೆ ಜೀವನ ಪಾಠ ಹೇಳುವ ಮೂಲಕ ವಿದ್ಯಾರ್ಥಿಗಳ ಹಾಗೂ ದೇಶದ ಅಭಿವೃದ್ಧಿಯನ್ನು ಕಾಣಬಹುದು. ಅರಿವಿಲ್ಲ ಮಾಡುವ ತಪ್ಪಿಗೆ ಕ್ಷಮೆ ಇದೆ, ಆದರೆ ಗೊತ್ತಿದ್ದು ಮಾಡುವ ತಪ್ಪಿಗೆ ಕ್ಷಮೆ ಇಲ್ಲ. ಜೀವನದಲ್ಲಿ ಮೌಲ್ಯಗಳಿರಬೇಕು. ಆದರ್ಶದಿಂದ ಬದುಕಲು ಕಲಿಯೋಣ ಇಲ್ಲದಿದ್ದರೆ ಬದುಕು ವ್ಯರ್ಥ ಎಂದು ಡಾ. ದಿವಾಕರ್ ಕೆ ಹೇಳಿದರು.
ಎಸ್.ಡಿ.ಎಂ ಮಹಿಳಾ ಐಟಿಐ ಉಜಿರೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಟಿದ/ತುಳುನಾಡಿನ ಮಹತ್ವ ಸಾರುವ ಹಾಡು, ತುಳುವಿನಲ್ಲಿ ತಿಂಗಳ ಹೆಸರುಗಳು ಹಾಗೂ ತುಳುನಾಡ ಹಬ್ಬದ ವೈಶಿಷ್ಟ್ಯ ಕುರಿತು ವಿವರಣೆ ನೀಡಿದರು
ವೇದಿಕೆಯಲ್ಲಿ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿನಿಯರು ತಾವೇ ತಯಾರಿಸಿದ ಮಳೆಗಾಲದ ವಿವಿಧ ಬಗೆಯ ಆಹಾರ ಪದಾರ್ಥದ ರುಚಿಯನ್ನು ಎಲ್ಲರಿಗೂ ಹಂಚಿ ಸಂಭ್ರಮಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ