ಲ್ಯಾಂಡ್‌ಲಿಂಕ್ಸ್‌ ಬಡಾವಣೆ: ರಸ್ತೆ ಹೊಂಡಗಳನ್ನು ಮುಚ್ಚಲು 'ನಮ್ಮ ಊರು ನಮ್ಮ ರಸ್ತೆ' ಅಭಿಯಾನ

Upayuktha
0


ಕೊಂಚಾಡಿ: ಲ್ಯಾಂಡ್‌ ಲಿಂಕ್ಸ್‌ ಬಡಾವಣೆಯ ರಸ್ತೆಗಳೆಲ್ಲ ಹೊಂಡಮಯವಾಗಿದ್ದು, ವಾಹನ ಸಂಚಾರಕ್ಕೆ ಮಾತ್ರವಲ್ಲ ಕಾಲ್ನಡಿಗೆಯಲ್ಲಿ ನಡೆದಾಡುವವರಿಗೂ ಓಡಾಟ ಕಷ್ಟ ಎನ್ನುವ ಪರಿಸ್ಥಿತಿಯಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಹೊಂಡಗಳನ್ನು ಮುಚ್ಚಲು ಸ್ಥಳೀಯ ನಾಗರಿಕರೇ ಸೇರಿಕೊಂಡು 'ನಮ್ಮ ಊರು ನಮ್ಮ ರಸ್ತೆ ಅಭಿಯಾನ' ಆರಂಭಿಸಿದ್ದಾರೆ.


ಈ ಅಭಿಯಾನದ ಮೊದಲ ಹಂತದಲ್ಲಿ ಇಂದು (ಆ.25- ಭಾನುವಾರ) ಬೆಳಗ್ಗೆ 6ರಿಂದ 8 ಗಂಟೆಯ ವರೆಗೆ 1ನೇ ಮುಖ್ಯ ರಸ್ತೆ ಹಾಗೂ ಮುಖ್ಯ ರಸ್ತೆ ಸೇರುವಲ್ಲಿ ಶ್ರಮದಾನ ನಡೆಸಿದರು. ಇಲ್ಲಿನ ನಿವಾಸಿಗಳಾದ ಅಶೋಕ, ಹಿಮಕರ ರಾವ್, ಸುನೀಲ್ ಹಯವದನ, ಶರವಣ ಮತ್ತು ರಘುರಾಮ ರಾವ್ ರವರು ಶ್ರಮದಾನ ಮಾಡಿ ತಾತ್ಕಾಲಿಕ ಪರಿಹಾರ ಕ್ರಮವಾಗಿ ರಸ್ತೆ ಹೊಂಡಗಳನ್ನು ಮುಚ್ಚಿದರು.


ಈ ಅಭಿಯಾನದ ಮೂಲಕ ಎಲ್ಲಾ ನಿವಾಸಿಗಳು ತಮ್ಮ ತಮ್ಮ ಮನೆಯ ಹತ್ತಿರ ಕೈಲಾದಷ್ಟು ಹೊಂಡ ತುಂಬಿಸಿ ಲ್ಯಾಂಡ್ ಲಿಂಕ್ಸ್ ಅಸೋಸಿಯೇಷನ್ ಗುಂಪಿನಲ್ಲಿ ಹಾಕಬೇಕು. ಅಂತೆಯೇ ಪ್ಲಾಸ್ಟಿಕ್ ಮುಕ್ತ ಲ್ಯಾಂಡ್ ಲಿಂಕ್ಸ್ ದೇರೇಬೈಲು ಕೊಂಚಾಡಿ ಮಾಡಲು ಎಲ್ಲಾ ನಿವಾಸಿಗಳು ವಸತಿ ಸಮುಚ್ಚಯದವರೂ ಸಹಕರಿಸಬೇಕು ಎಂದು ಎಂದು ಅಭಿಯಾನದ ರೂವಾರಿಗಳು ವಿನಂತಿಸಿದ್ದಾರೆ.


ಲ್ಯಾಂಡ್ ಲಿಂಕ್ಸ್ ದೇರೇಬೈಲು ಕೊಂಚಾಡಿ ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಮಾರಣಾಂತಿಕ ಹೊಂಡಗಳನ್ನು ತುಂಬಿಸಲು ನಗರಪಾಲಿಕೆಯ ಕಾರ್ಪೋರೇಟರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ಮನಗಂಡ ನಾಗರಿಕರು ಸ್ವತಃ ಅಭಿಯಾನ ಆರಂಭಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top