ಕೂಟ ಚಾವಡಿ ತುಳು ಭಾಷೆ, ಲಿಪಿಯ ಕಲಿಕಾ ಕೇಂದ್ರವಾಗಲಿ: ಹೇಮಂತ್ ಗರೋಡಿ

Chandrashekhara Kulamarva
0


ಮಂಗಳೂರು: ತುಳು ಭಾಷಾ ಬೆಳವಣಿಗೆಗೆ ನಾವು ಅಗತ್ಯ ಪ್ರಯತ್ನ ಪಡಬೇಕಾಗಿದೆ. ಅಂತೆಯೇ ಅದನ್ನು ಮುಂದಿನ ಪೀಳಿಗೆಗೆ ತಲುಪಿಸಲು ನಾವು ಮಕ್ಕಳಲ್ಲಿ ತುಳುಕಲಿಕಾ ಸ್ಪೂರ್ತಿಯನ್ನೂ ವೃದ್ಧಿಸಬೇಕಾಗಿದೆ. ಹಾಗಾಗಿ ತುಳುಕೂಟದ ಈ ನೂತನ ಕಟ್ಟಡ ಕೂಟ ಚಾವಡಿ ನಿರಂತರ ಕಲಿಕಾ ಕೇಂದ್ರವಾಗಿರಲಿ- ಎಂದು ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಹೇಮಂತ್ ಗರೋಡಿ ಹೇಳಿದರು.


ಅವರು ಜನತಾ ಬಜಾರಿನಲ್ಲಿ ತುಳುಕೂಟದ ನೂತನ ಕಟ್ಟಡ ಕೂಟ ಚಾವಡಿಯ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದರು.

 

ಮುಖ್ಯ ಅತಿಥಿ ಲೇಖಕಿ, ವಾಗ್ಮಿ, ನಿವೃತ್ತ ಶಿಕ್ಷಕಿ ಕೆ.ಎ. ರೋಹಿಣಿಯವರು "ಮಹಿಳೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ತುಳು ಸಾಂಸ್ಕೃತಿಕತೆಯ ಬಗ್ಗೆ ತಿಳಿ ಹೇಳುತ್ತಾ, ಎಳೆಯರೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರೆ ತುಳು ಕೂಟದ ಉದ್ದೇಶ ಸಾರ್ಥಕವಾಗುತ್ತದೆ ಎಂದು ನುಡಿದರು.


ತುಳು ಕೂಟದ ಅಧ್ಯಕ್ಷ ಮರೋಳಿ ಬಿ. ದಾಮೋದರ ನಿಸರ್ಗ ಸಭಾದ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಸುವರ್ಣ, ನಾರಾಯಣ ಬಿ.ಡಿ, ಹೇಮಾ ನಿಸರ್ಗ, ಪಿ. ಗೋಪಾಲಕೃಷ್ಣ, ಸುಜಾತಾ ಸುವರ್ಣ, ಭಾಸ್ಕರ ಕುಲಾಲ್ ಬರ್ಕೆ, ರಮೇಶ್ ಕುಲಾಲ್ ಬಾಯಾರ್, ವಿಶ್ವನಾಥ ಪೂಜಾರಿ ಸೋಣಳಿಕೆ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪ್ರಕಾರ್ಯದರ್ಶಿ ಸಭೆ ನಿರ್ವಹಿಸಿ, ವಂದನಾರ್ಪಣೆಗೈದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top