ಕಲಾಭಿ ಥಿಯೇಟರ್ ನ ಎಕ್ಸ್‌ಪ್ರೆಸ್ ಉದ್ಘಾಟನೆ

Upayuktha
0


ಉರ್ವ: ಕಲಾಭಿ ಥಿಯೇಟರ್ ವತಿಯಿಂದ ಕಲಾಪ್ರೇಕ್ಷಕರಿದ್ದಲ್ಲಿಗೆ ಕಲಾವಿದರನ್ನು ತರುವ ನಿಟ್ಟಿನಲ್ಲಿ ಕುಡ್ಲ ಆರ್ಟ್ ಫೆಸ್ಟಿವಲ್ ಇವರ ಸಹಯೋಗದೊಂದಿಗೆ ಕೆನರಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ಆಗಸ್ಟ್ 10,2024 ನೇ ಶನಿವಾರ ಮಂಗಳೂರಿನ ಉರ್ವಾ ಕೆನರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ "ಕಲಾಭಿ ಥಿಯೇಟರ್ ಎಕ್ಸ್‌ಪ್ರೆಸ್" ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ ಎಸ್ ಸಿಎಸ್ ಪ್ರಿ -ಸ್ಕೂಲ್ ಇದರ ಪ್ರಾಂಶುಪಾಲೆ ಶ್ರೀಮತಿ ವಿನಯ ಡಿಸೋಜಾ ಮಾತನಾಡಿ ಕಲಾವಿದರಿಗೆ ಶುಭನುಡಿಯನ್ನಿತ್ತರು.


ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸದಸ್ಯ ಯೋಗೇಶ್ ಆರ್ ಕಾಮತ್, ಹಾಗೂ ಕಲಾಭಿ ಸಂಸ್ಥೆಯ ಪೇರೆಂಟ್ಸ್ ಪ್ರೆಸಿಡೆಂಟ್ ಮಹೇಶ್ ಆರ್ ಕಾಮತ್ ಕಲಾವಿದರಿಗೆ ಶುಭ ಹಾರೈಸಿದರು. ಕೆನರಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಲಲನಾ ಶೆಣೈ, ಕೆನರಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದುಮತಿ, ಕಲಾಭಿ (ರಿ) ಗೌರವ ಅಧ್ಯಕ್ಷರಾದ ಸುರೇಶ್ ವರ್ಕಾಡಿ, ಕಲಾಭಿ (ರಿ) ಅಧ್ಯಕ್ಷರಾದ ಡಾ. ಮೀನಾಕ್ಷಿ ರಾಮಚಂದ್ರ, ಕುಡ್ಲ ಆರ್ಟ್ ಫೆಸ್ಟಿವಲ್ ಇದರ ಸಂಚಾಲಕರಾದ ಪ್ರೇಕ್ಷ ತೇಜೋಮಯ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸಭಾ ಕಾರ್ಯಕ್ರದ ನಂತರ ಕಲಾಭಿ ಥಿಯೇಟರ್ ಎಕ್ಸ್‌ಪ್ರೆಸ್ ಇದರ ನೂತನ ಲೋಗೋ ಅನಾವರಣ ಕಾರ್ಯಕ್ರಮ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಕೆನರಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಕಲಾಪೋಷಕರು, ಕಲಾಪ್ರೇಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಲಾಭಿ (ರಿ ) ಸದಸ್ಯೆ ಕುಮಾರಿ. ಸಿಂಚನ ಮಠದ್ ಕಾರ್ಯಕ್ರಮ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top