ಕಲ್ಬುರ್ಗಿ: ಯಾವುದೇ ವೃತ್ತಿಗೆ ಬದ್ಧತೆಯಿಂದ ನ್ಯಾಯ ಒದಗಿಸಿದರೆ ಆ ವೃತ್ತಿಯ ಕರ್ತವ್ಯವು ಸೇವಸ್ಥಾನಕ್ಕೆ ಏರುತ್ತದೆ ಎಂದು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದರು.
ಕೆಕೆಆರ್‌ಟಿಸಿ ಚಾಲಕನಾಗಿ 26 ವರ್ಷ ವೃತ್ತಿ ನಿರ್ವಹಿಸಿ ನಿವೃತ್ತರಾದ ಆಂಜನೇಯ ಬಿ. ಗುತ್ತೇದಾರ್ ತೆಲ್ಲೂರು ಅವರನ್ನು ಕನ್ನಡ ಭವದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸನ್ಮಾನಿಸಿ ಮಾತನಾಡುತ್ತಾ ಸರಕಾರಿ ಹುದ್ದೆಗೆ ಸೇರಿದವರೆಲ್ಲರೂ ಸೇವೆಗೆ ಪಾತ್ರರಾಗುವುದಿಲ್ಲ. ತಮ್ಮ ಕರ್ತವ್ಯವನ್ನು ಮಾತ್ರನಿರ್ವಹಿಸಿ ಸಂಬಳ ಪಡೆಯುತ್ತಾರೆ.
ಆದರೆ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸಿದರೆ ಆ ಕರ್ತವ್ಯವು ಸೇವಾ ಸ್ಥಾನ ಪಡೆದು ಸಾರ್ವಜನಿಕರ ಮುಕ್ತ ಪ್ರಶಂಸೆ ಹಾಗೂ ಸನ್ಮಾನಕ್ಕೆ ಅರ್ಹರಾಗುತ್ತಾರೆ. ಆಂಜನೇಯ ಅವರು ತಮ್ಮ ಸೇವಾ ಅವಧಿಯಲ್ಲಿ ಅಪಘಾತ ರಹಿತ ಚಾಲಕನಾಗಿ ಎಲ್ಲರ ಪ್ರೀತಿ ಪಾತ್ರರಾಗಿ ಕೆಲಸ ನಿರ್ವಹಿಸಿದ ಕಾರಣದಿಂದ ಅವರಿಗೆ ಸಾರ್ವಜನಿಕವಾಗಿ ಸನ್ಮಾನ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಜೆಡಿಎಸ್ ನ ಹಿರಿಯ ಮುಖಂಡ ದೇವೇಗೌಡ ತೆಲ್ಲೂರು ಮಾತನಾಡಿ ಆಂಜನೇಯ ಅವರ ವ್ಯಕ್ತಿತ್ವ ವಿಶಿಷ್ಟವಾಗಿದ್ದು ಚಾಲಕ ವೃತ್ತಿಯೊಂದಿಗೆ ಸಂಗೀತ ಕಲಾವಿದನಾಗಿ ಜನಾನುರಾಗಿ ವ್ಯಕ್ತಿಯಾಗಿ ಬೆಳೆದವರು ತಮ್ಮ ಸೇವಾ ಅವಧಿಯಲ್ಲಿ ಅಜಾತಶತ್ರುವಾಗಿ ಬೆಳೆದು ಬಂದವರು ಎಂದರು.
ಸಾನಿಧ್ಯ ವಹಿಸಿದ ಕೊಳ್ಳೂರ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಮೃತ್ಯುಂಜಯ ದೇವರು ಮಾತನಾಡಿ ಯಾವುದೇ ಕಾಯಕವಾದರೂ ಶ್ರದ್ಧೆ, ಭಕ್ತಿ ಮತ್ತು ತಾಳ್ಮೆಯಿಂದ ಮಾಡಿದಾಗ ಜನಪ್ರೀತಿ ತಾನಾಗಿ ಲಭಿಸುತ್ತದೆ. ಆಂಜನೇಯ ಅವರು ತನ್ನ ಬಹುಮುಖ ಪ್ರತಿಭೆಯೊಂದಿಗೆ ಎಲ್ಲರ ಪ್ರೀತಿ ಪಾತ್ರರಾಗಿದ್ದು ಸೇವಾ ನಿವೃತ್ತಿಯ ನಂತರವೂ ಸಂಗೀತ ಪ್ರವೃತ್ತಿಯ ಮೂಲಕ ಸಮಾಜದಲ್ಲಿ ಉತ್ತಮ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲ್ಬುರ್ಗಿ ಜಿಲ್ಲಾ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರು ಮಾತನಾಡಿ ತನ್ನ ಸರಳ ವ್ಯಕ್ತಿತ್ವದಿಂದ ಮನೆಯ ಗೌರವವನ್ನು ಹೆಚ್ಚಿಸಿದ ಮತ್ತು ಸರಕಾರಿ ನೌಕರಿಗೆ ನ್ಯಾಯ ಒದಗಿಸಿದ ಕೀರ್ತಿ ಆಂಜನೇಯ ಅವರಿಗೆ ಸಲ್ಲುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಉದ್ಯಮಿಗಳಾದ ಮಹಾದೇವ ಬಿ. ಗುತ್ತೇದಾರ್ ಮಾತನಾಡಿ ಹುಟ್ಟೂರು ತೆಲ್ಲೂರು ಗ್ರಾಮಕ್ಕೆ ಸೇವೆಯ ಮೂಲಕ ಹೆಸರು ತಂದುಕೊಟ್ಟ ಆಂಜನೇಯ ಗುತ್ತೇದಾರ್ ಮಾದರಿ ಜೀವನವನ್ನು ಮಾಡಿ ಆದರ್ಶಪ್ರಾಯರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಯ್ಯ ಗುತ್ತೇದಾರ್ ಸ್ವಾಗತಿಸಿದರು. ನ್ಯಾಯವಾದಿ ರಾಜಕುಮಾರ ಹುಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಸೈದಪ್ಪ ಚೌಡಾಪುರ ಪ್ರಾರ್ಥನ ಗೀತೆಯನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಬಾಬು ಗೌಡ ಪಾಟೀಲ್ ತೆಲ್ಲೂರು, ಖ್ಯಾತ ಸಂಗೀತ ಕಲಾವಿದರಾದ ಸಿದ್ದರಾಮ ಪೊಲೀಸ್ ಪಾಟೀಲ್ ಕುಕನೂರು, ಶೇಖ್ ಮುಜೀಬ್ ಸಂಗೀತ ಕಲಾವಿದರಾದ ಬಾಬು ರಾವ ಕೋಬಾಲ್, ಉದ್ಯಮಿ ಗಳಾದ ರಾಜೇಶ್ ದತ್ತು ಗುತ್ತೇದಾರ್, ಅಂಬಯ್ಯ ಗುತ್ತೇದಾರ್, ನೀಲಕಂಠಯ್ಯ ಸ್ವಾಮಿ ಹಿರೇಮಠ್ ರವಿಕುಮಾರ್ ಶಂಕರ್ ರಾವ್ ಹುಲ್ಲೂರ್, ಶಂಕರ ಮಗಿ, ಗಂಗಾಧರ ಸಾವಳಗಿ ಕಾಶಯ್ಯ ಗುತ್ತೇದಾರ್, ಬಸಯ್ಯ ಗುತ್ತೇದಾರ್ ತೆಲ್ಲೂರ್, ರತ್ನಾ ಬಾಯಿ ಹಾಗೂ ಗೌರಮ್ಮ ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು. ಸಂಗೀತ ಶಿಕ್ಷಕರಾದ ಶಿವಶಂಕರ್ ಬಿರಾದಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಆಂಜನೇಯ ಬಿ ಗುತ್ತೇದಾರ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ