ಶ್ರೀ ಭಾರತೀ ವಿದ್ಯಾರ್ಥಿನಿ ನಿಲಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Upayuktha
0

ಮಂಗಳೂರು: ನಂತೂರಿನಲ್ಲಿರುವ ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾ ಇದರ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವವನ್ನು ಶ್ರೀ ಭಾರತೀ ವಿದ್ಯಾರ್ಥಿನಿ ನಿಲಯದ ಆವರಣದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ನಿಡುಗಳ ಕೃಷ್ಣ ಭಟ್ ಅವರು ಧ್ವಜಾರೋಹಣ ನೆರವೇರಿಸಿ ದೇಶವಾಸಿಗಳೆಲ್ಲ ಒಗ್ಗಟ್ಟಾಗಿ ಮುನ್ನಡೆಯಬೇಕಾದ ಅಗತ್ಯವನ್ನು ತಿಳಿಸಿಕೊಟ್ಟರು. 


ಸದಸ್ಯೆ ವಿಜಯಲಕ್ಷ್ಮಿ ಉಳುವಾನ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳು ಹಿಂಸಾಚಾರದ ದಳ್ಳುರಿಗೆ ಸಿಲುಕಿ ನಲುಗುತ್ತಿರುವ ಪರಿಸ್ಥಿತಿಯನ್ನು ಪ್ರಸ್ತಾವಿಸಿ ಭಾರತೀಯರೆಲ್ಲರೂ ಅಲ್ಲಿನ ಹಿಂದೂಗಳ ರಕ್ಷಣೆಗೆ ಒಕ್ಕೊರಲಿನ ಧ್ವನಿ ಎತ್ತಿ ಅವರ ರಕ್ಷಣೆಗೆ ಧಾವಿಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. 

 

ಸಮಿತಿಯ ಇನ್ನೋರ್ವ ಸದಸ್ಯರಾದ ಡಾ. ವಸಂತಕುಮಾರ ಪೆರ್ಲ ಅವರು ಮಾತಾಡುತ್ತ ಸ್ವಾತಂತ್ರ್ಯ ಲಭಿಸಿದಂದಿನಿಂದ, ಅಂದರೆ ಕಳೆದ 78 ವರ್ಷಗಳಿಂದಲೂ ನಾವು ಭಾರತೀಯರು ಶ್ರದ್ಧೆ ನಿಷ್ಠೆ ಹಾಗೂ ಗೌರವದಿಂದ ಸ್ವಾತಂತ್ರ್ಯೋತ್ಸವವನ್ನು ಅದೇ ಬೆಚ್ಚನೆಯ ಭಾವದಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಇದೊಂದು ರಾಷ್ಟ್ರೀಯ ಉತ್ಸವ. ಮುಂದಿನ ತಲೆಮಾರಿಗೆ ಸ್ವಾತಂತ್ರ್ಯದ ಘನತೆ ಹಾಗೂ ಮೌಲ್ಯವನ್ನು ದಾಟಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಹಾಗಾಗಿ ಎಲ್ಲರೂ ಇಂತಹ ಆಚರಣೆಗಳಲ್ಲಿ ಭಾಗವಹಿಸಬೇಕು ಎಂದರು. 


ಸಮಿತಿಯ ಸದಸ್ಯರಾದ ವಸಂತಿ ಎಸ್. ಭಟ್, ಪುಷ್ಪಾ ಖಂಡಿಗೆ, ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

 

ಭಾರತೀ ಹಾಸ್ಟೆಲಿನ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿ ವರ್ಗದವರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top