ಹಾಸನ: ಸೆ.1ರಂದು ಪ್ರೊಫೆಸರ್ ಎಚ್ಚೆಸ್ಕೆ ಸಾಹಿತ್ಯ ವಿಚಾರ ಸಂಕಿರಣ

Upayuktha
0




ಹಾಸನ: ಮನೆ ಮನೆ ಕವಿಗೋಷ್ಠಿ ಬಳಗದ 321ನೇ ತಿಂಗಳ ಕಾರ್ಯಕ್ರಮವನ್ನು ಮುಂಬರುವ ಸೆಪ್ಟೆಂಬರ್ 1ರಂದು ಹಿರಿಯ ರಂಗಭೂಮಿ ಕಲಾವಿದರಾದ ಯಲಗುಂದ ಶಾಂತಕುಮಾರ್ ಅವರ ನಿವಾಸದಲ್ಲಿ, ಹಾಸನ ಶಾಂತಿ ನಗರದ ಉಮಾ ಮಹೇಶ್ವರ ಸಮುದಾಯ ಭವನದ ಎರಡನೇ ತಿರುವು, 16ನೇ ವಾರ್ಡ್, ಮನೆ ಸಂಖ್ಯೆ 272/1 ರಲ್ಲಿ ಏರ್ಪಡಿಸಲಾಗಿದೆ.


ಕಾಯ೯ಕ್ರಮದಲ್ಲಿ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತನಾಮರಾದ ಪ್ರೊಫೆಸರ್ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಅವರ ಬದುಕು ಮತ್ತು ಸಾಹಿತ್ಯ ಕುರಿತು ಕೆ. ಆರ್. ನಗರದ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗದ ಅಧ್ಯಕ್ಷ ಭೇರ್ಯ ರಾಮಕುಮಾರ್‌ ಮಾತನಾಡುವವರು. ಆಗಮಿಸಿದ ಕವಿಗಳಿಂದ ಕವಿಗೋಷ್ಠಿ, ರಂಗಭೂಮಿ ಕಲಾವಿದರಿಂದ ರಂಗಗೀತೆಗಳು, ಗಾಯಕ ಗಾಯಕಿಯರಿಂದ ಬಾವಗೀತೆಗಳು, ಜನಪದ ಗೀತೆಗಳನ್ನು ಹಾಡಲು ಅವಕಾಶ ಇರುವುದಾಗಿ ಮನೆ ಮನೆ ಕವಿಗೋಷ್ಠಿ ಸಂಚಾಲಕ ಗೊರೂರು ಅನಂತರಾಜು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top