ಪಣಜಿ: ಹೊರನಾಡ ಗೋವೆಯಲ್ಲಿ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ಹಾಗೂ ಕನ್ನಡತನದ ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಗೋವಾ ರಾಜಧಾನಿ ಪಣಜಿಯಲ್ಲಿರುವ ಗೋವಾ ಕನ್ನಡ ಸಮಾಜ ಸತತವಾಗಿ ಶೃಮಿಸುತ್ತಿದೆ. ಅಂದಿನಿಂದ ಸಾಕಷ್ಟು ಜನ ಹಿರಿಯರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದಾರೆ. ಮುಂದೆಯೇ ಕೂಡ ಎಲ್ಲರ ಸಹಕಾರದಲ್ಲಿ ಗೋವಾ ಕನ್ನಡ ಸಮಾಜದ ಮೂಲಕ ಗೋವಾದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಈ ಕನ್ನಡದ ತೇರನ್ನು ಎಳೆದು ಸಾಗೋಣ ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ನುಡಿದರು.
ಪಣಜಿಯಲ್ಲಿರುವ ಗೋವಾ ಕನ್ನಡ ಸಮಾಜದ ಕಛೇರಿಯಲ್ಲಿ ಆಗಸ್ಟ್ 9 ರಂದು ಶುಕ್ರವಾರ ಸಂಜೆ ಕರೆದಿದ್ದ ನೂತನ ಪದಾಧಿಕಾರಿಗಳ ಕಾರ್ಯಕಾರಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಳೆದ ಹಲವು ವರ್ಷಗಳ ಕಾಲ ಗೋವಾ ಕನ್ನಡ ಸಮಾಜದ ಕಾರ್ಯದರ್ಶಿಯಾಗಿ ನಾನು ಕೆಲಸ ನಿರ್ವಹಿಸಿದ್ದೇನೆ. ಒಂದರ್ಥದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುವುದು ಸುಲಭ, ಆದರೆ ಅಧ್ಯಕ್ಷರಾಗಿ ಕೆಲಸ ಮಾಡುವುದು ಎಂದರೆ ತುಂಬಾ ದೊಡ್ಡ ಜವಾಬ್ದಾರಿ. ಇಂತಹ ದೊಡ್ಡ ಜವಾಬ್ದಾರಿಯನ್ನು ಇದೀಗ ನಮ್ಮ ಸಮಾಜವು ನನಗೆ ನೀಡಿದೆ. ಗೋವಾ ಕನ್ನಡ ಸಮಾಜದ ಸದಸ್ಯತ್ವದ ಪಡೆದುಕೊಳ್ಳದೇ ಇದ್ದರೆ ಅಂತವರು ಅಜೀವ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಅರುಣಕುಮಾರ್ ನುಡಿದರು.
ನೂತನವಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ವಿವಿಧ ಜವಾಬ್ದಾರಿಗಳನ್ನು ನೀಡಿದರು. ಸಮಾಜದ ಕಾರ್ಯಕ್ರಮಗಳ ಬರವಣಿಗೆ, ಮಾಧ್ಯಮ ಪ್ರಕಟಣೆ, ವಾಟ್ಸಾಪ್ ಮತ್ತು ಫೇಸ್‍ಬುಕ್ ಮೂಲಕವಾಗಿ ನಮ್ಮ ಎಲ್ಲ ಸದಸ್ಯರಿಗೆ ಮತ್ತು ಕನ್ನಡಿಗರಿಗೆ ಗೋವಾ ಕನ್ನಡ ಸಮಾಜದ ಎಲ್ಲ ಕಾರ್ಯ ಚಟುವಟಿಕೆಗಳ ವಿವರ ತಲುಪುವಂತೆ ಮಾಡುವುದು. ಕನ್ನಡ ಸೇವೆಗಾಗಿ ಕನ್ನಡ ಸಮಾಜ ಸಕ್ರಿಯವಾಗಿ ಕಾರ್ಯ ಮುಂದುವರೆಸಿಕೊಂಡು ಹೋಗಲು ಎಲ್ಲ ಪದಾಧಿಕಾರಿಗಳು ಸಕ್ರೀಯರಾಗಿರುವುದು ಮತ್ತು ಎಲ್ಲ ಸಭೆ, ಕಾರ್ಯಕ್ರಮಗಳಿಗೆ ಖಡ್ಡಾಯವಾಗಿ ಹಾಜರಾಗುವುದು ಸೇರಿದಂರೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಜವಾಬ್ದಾರಿಯನ್ನು ಪದಾಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್ ಪೈ, ಅಖಿಲಾ ಕುರಂದವಾಡ, ಕಾರ್ಯದರ್ಶಿ ಶ್ರೀಕಾಂತ ಲೋಣಿ, ಸಹಕಾರ್ಯದರ್ಶಿ ಪ್ರಹ್ಲಾದ ಗುಡಿ, ಗಣೇಶ ಹೆಗಡೆ, ಖಜಾಂಚಿ ಸಂದೇಶ ಗಾಡವಿ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಸದಸ್ಯರಾದ ಸಂಶುದ್ದೀನ್ ಸೊಲ್ಲಾಪುರ, ನಿರಂಜನ್, ನೀರಜ್ ದಿವಾಕರ, ಸಿ.ಜಿ.ಕಣ್ಣೂರ, ಉಪಸ್ಥಿತರಿದ್ದು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ ಲೋಣಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಕೊನೆಯಲ್ಲಿ ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ