ಉಡುಪಿ: ಶ್ರೀ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೆ.7ರಂದು ಶನಿವಾರ ಗಣೇಶ ಚತುರ್ಥೀ ಉತ್ಸವ ನಡೆಯಲಿದೆ.
ಉತ್ಸವದ ಪ್ರಯುಕ್ತ ಲೋಕಸುಭಿಕ್ಷೆಗಾಗಿ ಬೆಳಗ್ಗೆ 7 ಗಂಟೆಯಿಂದ 1008 ಕಾಯಿ ಗಣಯಾಗ, ಮಹಾಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಉತ್ಸವದಲ್ಲಿ ಸೇವೆ ಸಲ್ಲಿಸಬಯಸುವ ಭಕ್ತಾದಿಗಳು ಅಕ್ಕಿ, ಬೇಳೆ, ಸಿಪ್ಪೆ ಇರುವ ತೆಂಗಿನ ಕಾಯಿ, ಬೆಲ್ಲ, ಸಕ್ಕರೆ, ಅವಲಕ್ಕಿ, ಅರಳು, ತುಪ್ಪ, ಕಬ್ಬು, ಎಳ್ಳೆಣ್ಣೆ ಇತ್ಯಾದಿ ದವಸ ಧಾನ್ಯಗಳನ್ನು ಸೆ.5ರ ಒಳಗಾಗಿ ಶ್ರೀ ದೇವರ ಭಂಡಾರಕ್ಕೆ ಒಪ್ಪಿಸಬಹುದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ. ವಿಷ್ಣುಮೂರ್ತಿ ಆಚಾರ್ಯ ಅವರನ್ನು ಸಂಪರ್ಕಿಸಬಹುದು.
ಸೇವೆ ಸಲ್ಲಿಸಲು ಬಯಸುವವರು 8431987846 ಈ ಸಂಖ್ಯೆಗೆ ಅಥವಾ 208015937009452@cnb ಈ ಯುಪಿಐ ಐಡಿಗೆ ಗೂಗಲ್ ಪೇ ಮತ್ತು ಫೋನ್ ಪೇ ಅಥವಾ ಕ್ಯೂ ಆರ್ ಕೋಡ್ ಬಳಸಿಯೂ ಹಣವನ್ನು ಪಾವತಿಸಬಹುದು .
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ