ಗಮಕ ಕಲೆ ಕನ್ನಡ ಸಂಸ್ಕೃತಿಯ ದ್ಯೋತಕ: ರೇಷ್ಮಾ ಶಂಕರಿ ಬಲಿಪಗುಳಿ

Upayuktha
0


ಮೂರುಕಜೆ: "ಗಮಕ ಕಲೆ ಕನ್ನಡ ಸಂಸ್ಕೃತಿಯ ದ್ಯೋತಕ. ಅದು ಅತ್ಯಂತ ಪ್ರಾಚೀನವಾದುದು. ಭಾರತೀಯ ಸಂಸ್ಕೃತಿಯನ್ನು ಜನರಿಗೆ ಯಥಾವತ್ತಾಗಿ ಪರಿಚಯಿಸುವುದಕ್ಕೆ ಇದು ಬಹಳ ಉತ್ತಮವಾದ ಮಾಧ್ಯಮ. ಗಮಕ ಕಲಾಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳು ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಪರ್ವಕಾಲದಲ್ಲಿ ವಿಶೇಷವಾಗಿ ರಾಮಾಯಣದ ಪುಣ್ಯಕಥೆಯನ್ನು ಪ್ರಚಾರಗೊಳಿಸಿ ಜನರಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ" ಎಂದು ವಿಟ್ಳ ಪಡ್ನೂರು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷೆ ಶ್ರೀಮತಿ ರೇಶ್ಮ ಶಂಕರಿ ಬಲಿಪಗುಳಿ ಅಭಿಪ್ರಾಯ ಪಟ್ಟರು.


ಅವರು ದೀಪಬೆಳಗಿಸಿ ಈ ವರ್ಷದ "ಗಮಕ ಶ್ರಾವಣ" ದ ಸರಣಿ ಕಾರ್ಯಕ್ರಮಗಳ ದ್ವಿತೀಯ ಸಮಾರಂಭದ ಉದ್ಘಾಟನೆಯನ್ನು ಮೂರ್ಕಜೆಯ ಮೈತ್ರೇಯಿ ಗುರುಕುಲದ ಸಭಾಂಗಣದಲ್ಲಿ ನೆರವೇರಿಸಿ ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ಗಮಕಕಲಾ ಪರಿಷತ್ತಿನ ಅಧ್ಯಕ್ಷರಾದ ಟಿ.ಶಂಕರನಾರಾಯಣ ಭಟ್ಟರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುರುಕುಲದ ಅಧಿಕಾರಿಗಳಾದ ಶ್ರೀ ಜಗನ್ನಾಥ್ ಅವರು  "ಭಾರತೀಯ ಸಂಸ್ಕೃತಿಯನ್ನು ಸಾರುವ ಮಹಾಕಾವ್ಯಗಳನ್ನು ಸಾಧ್ಯವಿದ್ದಷ್ಟೂ ಪ್ರಚಾರಗೊಳಿಸಬೇಕು" ಎಂದು ಕರೆಯನ್ನಿತ್ತರು.


"ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಅವಳಿ ಪುತ್ರರಾದ ಕುಶ ಲವರು ಜನಿಸಿದುದು ಶ್ರಾವಣ ಮಾಸದಲ್ಲಿ. ಅವರು ಆದಿ ಗಮಕಿಗಳು ಎಂಬ ನಂಬಿಕೆ ನಮ್ಮದು. ಆದುದರಿಂದ ಅವರ ದಿವ್ಯಸ್ಮರಣೆಗೋಸ್ಕರವಾಗಿ ಶ್ರಾವಣ ಮಾಸದಲ್ಲಿ ನಾಡಿನ ವಿವಿಧ ಸಾಂಸ್ಕೃತಿಕ ಕೇಂದ್ರಗಳಲ್ಲಿ ಗಮಕ ಶ್ರಾವಣ ಎಂಬ ಹೆಸರಿನಲ್ಲಿ ರಾಮಾಯಣ ಮಹಾಕಾವ್ಯದಿಂದಾಯ್ದ ಭಾಗಗಳ ವಾಚನ ವ್ಯಾಖ್ಯಾನಗಳನ್ನು ನಡೆಸುತ್ತಾ ಬರುತ್ತಿದ್ದೇವೆ" ಎಂದು ಸಿರಿಗನ್ನಡ ವೇದಿಕೆಯ ಅಧ್ಯಕ್ಷರೂ ಗಮಕ ಪರಿಷತ್ತಿನ ಕಾರ್ಯದರ್ಶಿಯೂ ಆಗಿರುವ ವಿ.ಬಿ. ಕುಳಮರ್ವ ಪ್ರಸ್ತಾವನೆಯಲ್ಲಿ ತಿಳಿಸಿದರು.


ಈ ಸಂದರ್ಭದಲ್ಲಿ ತೊರವೆ ರಾಮಾಯಣದಿಂದಾಯ್ದ ವಿಶ್ವಾಮಿತ್ರರ ಯಜ್ಞರಕ್ಷಣೆಗೆ ಸಂಬಧಿಸಿದ ಭಾಗವನ್ನು ಗಮಕಿಗಳಾದ ನಿವೃತ್ತ ಪ್ರಾಂಶುಪಾಲ  ಉಂಡೆಮನೆ ವಿಶ್ವೇಶ್ವರ ಭಟ್ಟರು ಸುಶ್ರಾವ್ಯವಾಗಿ ವಾಚನ ಮಾಡಿದರು. ನಿವೃತ್ತ ಪ್ರಾಂಶುಪಾಲ ಪ್ರೊ| ಕುಳಮರ್ವ ಗಣಪತಿ ಭಟ್ಟರು ಮನೋಜ್ಞವಾಗಿ ವ್ಯಾಖ್ಯಾನ ಮಾಡಿದರು.


ವಿ.ಬಿ. ಕುಳಮರ್ವರು ಭಾಮಿನೀ ಷಟ್ಪದಿಯಲ್ಲಿ ರಚಿಸಿದ ಗಮಕ ಗೀತೆಯನ್ನು ಉಂಡೆಮನೆ ವಿಶ್ವೇಶ್ವರ ಭಟ್ಟರು ಹಾಡಿ ಪ್ರಾರ್ಥನೆ ಮಾಡಿದರು. ಗುರುಕುಲದ ಮಾತೆಯರು ಹಾಗೂ ವಿದ್ಯಾರ್ಥಿನಿಯರು ಸ್ವಾಗತ ಹಾಗೂ ಧನ್ಯವಾದ ಕಾರ್ಯಗಳನ್ನು ನೆರವೇರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top