ಮಂಗಳೂರು: ನಾಟೆಕಲ್ ನಲ್ಲಿರುವ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಂದ ಕನ್ಯಾನದ ಭಾರತ ಸೇವಾಶ್ರಮ ಆವರಣದಲ್ಲಿ ಉಚಿತ ಚಿಕಿತ್ಸಾ ಶಿಬಿರವನ್ನು ಇಂದು (ಆ.28) ಯಶಸ್ವಿಯಾಗಿ ನಡೆಸಲಾಯಿತು.
ಸೇವಾಶ್ರಮದ ಮುನ್ನೂರೈವತ್ತು ಆಶ್ರಮವಾಸಿಗಳ ರಕ್ತ, ಬಿ.ಪಿ ತಪಾಸಣೆ ಹಾಗೂ ಇತರ ತಪಾಸಣೆ ನಡೆಸಿ ಸೂಕ್ತ ಔಷಧಿಗಳನ್ನು ನೀಡಲಾಯಿತು.
ಆಸ್ಪತ್ರೆಯ ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ.ಜೈನುದ್ದೀನ್ ಹಾಗೂ ಇತರ ನಾಲ್ಕು ಮಂದಿ ವೈದ್ಯರೂ, ಇತರ ನರ್ಸ್ ಮತ್ತು ಲ್ಯಾಬ್ ಸಿಬ್ಬಂದಿಗಳೂ ಈ ಶಿಬಿರವನ್ನು ನಡೆಸಿಕೊಟ್ಟರು.
ಅಗತ್ಯವುಳ್ಳ ರೋಗಿಗಳಿಗೆ ಕಣಚೂರು ಆಸ್ಪತ್ರೆಯಲ್ಲಿ ಉಚಿತ ಒಳರೋಗಿ ಸೌಲಭ್ಯ ಹಾಗೂ ಎಲ್ಲರಿಗೂ ಆಯುಷ್ ಕಾರ್ಡ್ ನೀಡಲಾಯಿತು.
ಈ ಶಿಬಿರ ಪ್ರತಿ ತಿಂಗಳೂ ಮುಂದುವರಿಯಲಿದೆ. ಇತರ ಹಲವು ಕಡೆಗಳಲ್ಲಿ ಸಹ ಇಂತಹ ಶಿಬಿರ ನಡೆಸುವ ಆಶಯ ಸಂಸ್ಥೆಯ ಚೇರ್ ಮನ್ ಹಾಜಿ ಡಾ ಕಣಚೂರು ಮೋನು ಅವರದಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿ ಅವರು ತಿಳಿಸಿದರು.
ಸೇವಾಶ್ರಮದ ಮುಖ್ಯಸ್ಥ ಈಶ್ವರ ಭಟ್ಟರು ಈ ಶಿಬಿರದ ಪೂರ್ಣ ವ್ಯವಸ್ಥೆಯನ್ನು ಮಾಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ