ಅಧ್ಯಾಪಕರಿಗೂ ಸೂಕ್ತ ಮಾರ್ಗದರ್ಶನ ಅಗತ್ಯ: ಮಾಣಿಲ ಶ್ರೀ

Upayuktha
0


ಮಂಗಳೂರು: ಯುವ ಸಮುದಾಯವನ್ನು ಬೆಳೆಸುವಲ್ಲಿ ಅಧ್ಯಾಪಕರ ಪಾತ್ರ ಮಹತ್ತರವಾದದ್ದು. ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸಿ, ಆ ಮೂಲಕ ದೇಶದ ಅಭಿವೃದ್ಧಿ ಕಾಣುವಲ್ಲಿ ಅಧ್ಯಾಪಕರು ಪ್ರಮುಖ ಪಾತ್ರ ವಹಿಸುತ್ತಾರೆ, ಎಂದು ಮಾಣಿಲ ಶ್ರೀಧಾಮದ ಮೋಹನ ದಾಸ ಸ್ವಾಮೀಜಿ ತಿಳಿಸಿದರು.


ಕರ್ನಾಟಕ ರಾಜ್ಯ ಶಿಕ್ಷಕ ಮಹಾಸಂಘದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗ ಶ್ರೀ ಧಾಮ ಮಾಣಿಲದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಭಾಗ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಭದ್ರತೆಗೆ ಅಧ್ಯಾಪಕ ಸಂಘಟನೆಗಳು ಅಗತ್ಯವಾಗಿವೆ. ಅಂತಹ ಅಧ್ಯಾಪಕರಿಗೆ ಸೂಕ್ತ ಮಾರ್ಗದರ್ಶನಗಳು ಕೂಡ ಈ ದಿನಮಾನದಲ್ಲಿ ಅವಶ್ಯವಾಗಿದೆ, ಎಂದರು.


ಎರಡು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಚಿಂತಕರು ಉಪನ್ಯಾಸ ನೀಡಿದರು. ಕೆ.ಆರ್.ಎಂ.ಎಸ್ ನ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ. ಕೆ ಆಶಯ ನುಡಿಗಳನ್ನಾಡಿದರು. ಕೆ.ಆರ್.ಎಂ.ಎಸ್, ಮಂಗಳೂರು ವಿಭಾಗದ ಅಧ್ಯಕ್ಷೆ ಡಾ.ಸುಧಾ ಎನ್.ವೈದ್ಯ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಟೇಶ ನಾಯಕ್ ವಂದಿಸಿದರು. ಖಜಾಂಜಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.


ಸಮಾರೋಪ ಕಾರ್ಯಕ್ರಮದಲ್ಲಿ ಕಲ್ಲಡ್ಕ ಡಾ. ಪ್ರಭಾಕರ್ ಭಟ್, ದಕ್ಷಿಣ ಮಧ್ಯ ಕ್ಷೇತ್ರೀಯ ಪ್ರಮುಖ್ ರಘು ಅಕ್ಮಂಜಿ ಉಪಸ್ಥಿತರಿದ್ದರು.


ನೂತನ ಸಮಿತಿ ರಚನೆ

ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ಕೂಡ ರಚಿಸಲಾಯಿತು. ಅಧ್ಯಕ್ಷರಾಗಿ ಕೆನರಾ ಕಾಲೇಜಿನ ಡಾ.ವಾಣಿ ಯು.ಎಸ್, ಉಪಾಧ್ಯಕ್ಷರಾಗಿ ಡಾ. ಸುಭಾಷಿಣಿ ಶ್ರೀವತ್ಸ, ಡಾ ರಾಮಚಂದ್ರ ಪಾಟ್ಕರ್ ಉಡುಪಿ, ಡಾ ದಯಾನಂದ ಕೆ. ಸಿ ಕೊಡಗು, ಕಾರ್ಯದರ್ಶಿಯಾಗಿ ರಾಜೇಶ್, ಸಹ ಕಾರ್ಯದರ್ಶಿ ಗಳಾಗಿ ಜಯಲಕ್ಷ್ಮಿ ಆರ್ ಶೆಟ್ಟಿ, ಡಾ. ಪ್ರಜ್ಞಾ ಮಾರ್ಪಳ್ಳಿ ಉಡುಪಿ, ಡಾ. ಶೀನಪ್ಪ ಪುತ್ತೂರು, ಕೋಶಾಧಿಕಾರಿಯಾಗಿ ಶ್ರುತಿ ಎನ್, ವಿಭಾಗ ಪ್ರಮುಖ ರಾಗಿ ಡಾ ಮಾಧವ ಎಂ.ಕೆ, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟೇಶ್ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖರಾಗಿ ಡಾ. ಸುಧಾ ಎನ್‌. ವೈದ್ಯ, ಉಡುಪಿ ಜಿಲ್ಲಾ ಪ್ರಮುಖರಾಗಿ ಯಶವಂತ, ಕೊಡಗು ಜಿಲ್ಲಾ ಪ್ರಮುಖರಾಗಿ ಸಚಿನ್ ಎನ್.ಟಿ,  ಪುತ್ತೂರು ಜಿಲ್ಲಾ ಪ್ರಮುಖರಾಗಿ ಡಾ.ಪ್ರಮೋದ್ ಮತ್ತು ಮಹಿಳಾ ಪ್ರಮುಖರಾಗಿ ಪುಷ್ಪಲತಾ ಆಯ್ಕೆಯಾಗಿದ್ದಾರೆ.  ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಶಾಲತಾ, ಡಾ.ನಾಗರತ್ನ ರಾವ್, ಪ್ರಶಾಂತಿ ಶೆಟ್ಟಿ ಇರುವೈಲ್, ಡಾ. ಕುಮಾರೇಶ್ವರ ಭಟ್, ದಿಶಾ, ಶಂಕರನಾರಾಯಣ ಕುಂದಾಪುರ, ಜಯಲಕ್ಷ್ಮಿ ಕಲ್ಲಡ್ಕ, ಸಂಜನಾ, ಕಾಜಲ್, ಕಿರಣ್ ಚಂದ್ರ, ವಾಣಿಶ್ರೀ ಮತ್ತು ಪ್ರವೀಣ್ ಎಸ್ ಆಯ್ಕೆಯಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top