ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ನನ್ನ ಜಮೀನು ಒಳಗಡೆ ನಿಂತರೂ ನನ್ನ ಜಮೀನು 4 ಕಿ ಮೀ ದೂರದಲ್ಲಿದೆ ಅಂತ ತೋರಿಸುತ್ತಿದೆ. ಬೆಳೆ ಸಮೀಕ್ಷೆಗೆ ಬೆಳೆ ಸರ್ವೆ ಆ್ಯಪ್‌ನ GPS ಒಪ್ತಾ ಇಲ್ಲ. ದಿಶಾಂಕ್ ಆ್ಯಪ್‌ನಲ್ಲೂ ನನ್ನ ಜಮೀನು 4 ಕಿ ಮೀ ಹೊರಗಡೆ ಹೋಗಿದೆ!!
ಜಮೀನು ಇದ್ದಲ್ಲೇ ಇದೆ. ಮೊನ್ನೆಯ ಮಳೆಗೆ ಧರೆ ಜರಿದು ಹೋಗಿದ್ದಲ್ಲ, ಆ್ಯಪ್‌ನ GPS ನಲ್ಲಿ ಮಾತ್ರ ಜಮೀನು ಕುಸಿದು 4 ಕಿಮೀ ಸರಿದಿದೆ!
ಈ ಸಮಸ್ಯೆಗೆ ಐದು ದಿನಗಳಿಂದ ಮೊಬೈಲ್ ಹಿಡ್ಕೊಂಡು ತೋಟಗಾರಿಕೆ ಅಧಿಕಾರಿಗಳನ್ನು ಮೊಬೈಲ್‌ನಲ್ಲೇ ಸಂಪರ್ಕಿಸುತ್ತ, ತೋಟದಲ್ಲೇ ಪಾದಯಾತ್ರೆ ಮಾಡ್ತಾ ಇದ್ದೇನೆ! ಇವತ್ತೂ ಉತ್ತರ ಸಿಗದಿದ್ರೆ ರಣ ಕಹಳೆ ಮೊಳಗಿಸುವ ಯೋಜನೆ ಇದೆ!
ಕಳೆದ ವರ್ಷ ನಮ್ಮ ಜಮೀನಿಗೆ ಈ ಸಮಸ್ಯೆ ಇರಲಿಲ್ಲ. ಆದರೆ, ಕಳೆದ ವರ್ಷ ಅನೇಕರಿಗೆ ಬೆಳೆ ಸರ್ವೆ ಆ್ಯಪ್‌ನಲ್ಲಿ ಜಮೀನು ದೂರ ಸರಿದಿದ್ದು ಆಗಿತ್ತು!!!
ಕಳೆದ ವರ್ಷ ¾ ಎಕರೆ ಜಮೀನು ಇರುವ ಒಬ್ಬ ರೈತರ ಬೆಳೆ ಸಮೀಕ್ಷೆಯನ್ನು ಅವರ ಜಮೀನಿನ ½ ಕಿ.ಮೀ ಹೊರಗಡೆ ಹೋಗಿ ಕೊನೆಗೆ ಯಾರದ್ದೋ ತೋಟದ ಫೋಟೋ ತೆಗೆದು ಸಮೀಕ್ಷೆ ಎಂಟ್ರಿ ಮಾಡಿ ಕೊಡಬೇಕಾಯ್ತು.
PR ಗಳು ಬೆಳೆ ಸಮೀಕ್ಷೆ ಮಾಡಬೇಕಾದರೆ ಅವರು ಜಮೀನು ಒಳಗಡೆ ಬರಬೇಕಿಲ್ಲ. ಕಳೆದ ವರ್ಷ ನಮ್ಮ ಗ್ರಾಮದ PR, ಬಹುತೇಕ ಎಲ್ಲ ಜಮೀನಿನ ಬೆಳೆ ಸರ್ವೆಯನ್ನು ತನ್ನ ಮನೆಯಲ್ಲೆ ಕುಳಿತು ಮಾಡಿದ್ದಾರೆ. ಆತ ಕಾಲೇಜ್ ವಿದ್ಯಾರ್ಥಿಯಾಗಿದ್ದು, ಸಂಜೆ ಮನೆಗೆ ಬಂದ ಮೇಲೆ ಅವರ ಮನೆಯ ಮುಂದಿನ ತೋಟದ ಫೋಟೋವನ್ನೇ ಎಲ್ಲರ ಜಮೀನಿನ ಫೋಟೋ ಅಂತ ಬಿಂಬಿಸಿ ಅಪ್‌ಲೋಡ್ ಮಾಡಿದ್ದಾರೆ. (ಇದನ್ನು ಕಳೆದ ವರ್ಷ ಅವರ ಮಾತಿನಲ್ಲೇ ಕೇಳಿದ್ದನ್ನು ಆಡಿಯೋ ಮಾಡಿ ಈ ಗ್ರೂಪಲ್ಲೂ ಹಾಕಲಾಗಿತ್ತು.)
**
ನಮ್ಮ ಮನೆಯ ಗೂಗಲ್ ಮ್ಯಾಪ್‌ನ್ನು ಯಾರಿಗಾದರೂ ಕಳಿಸಿದರೆ, ಮತ್ತು ಅವರು ಅದನ್ನೇ ಇಟ್ಕೊಂಡು ನಮ್ಮ ಮನೆಗೆ ಹೊರಟರೆ, ನಮ್ಮ ಮನೆಯಿಂದ 200 ಮೀಟರ್ ದೂರದಲ್ಲಿ ಒಬ್ಬರು ಟ್ರಾಕ್ಟರ್, ಜೀಪ್ ನಿಲ್ಲಿಸುವುದಕ್ಕೆ ಒಂದು ಶೆಡ್ ಮಾಡಿದ್ದಾರೆ, ಅದರ ಬಳಿ ಬಂದಾಗ ಗೂಗಲ್ GPS ಮ್ಯಾಪ್ ಯೂ ರೀಚ್ಡ್ ಡೆಸ್ಟಿನೇಷನ್ ಅನ್ನುತ್ತೆ. ವಾಸ್ತವವಾಗಿ ಅಲ್ಲಿಂದ 200 ಮೀಟರ್ ಒಳಗಡೆ ಬರಬೇಕು!!! ಯಾವ ದಿಕ್ಕಿಗೆ ಅಂತ ಆ ಗೂಗಲ್ GPS ಹೇಳಲ್ಲ!!!
GPS ನಲ್ಲಿ ಹೀಗೆ ಅನೇಕ ಸಮಸ್ಯೆಗಳಿವೆ.
ರೆವೆನ್ಯೂ, ಫಾರೆಸ್ಟ್ GPS ಗಳಲ್ಲೂ ಈ ಸಮಸ್ಯೆಗಳು ಇರುವ ಸಾಧ್ಯತೆಗಳು ಇವೆ.
GPS ಕೂಡ ನಮ್ಮ ಕೆಲವು (ಎಲ್ಲರೂ ಅಲ್ಲ!) ಜನಪ್ರತಿನಿಧಿಗಳಂತೆ ಸುಳ್ಳು ಹೇಳುವ 'ಮಾರ್ಗದರ್ಶಕ'!
GPS ಮ್ಯಾಪ್ ಹಿಡ್ಕೊಂಡು ಬರುವ ಒತ್ತುವರಿ ತೆರವುದಾರ ಅಧಿಕಾರಿಗಳಿಗೆ ಈ ಮಾಹಿತಿಯನ್ನು ಸ್ಪಷ್ಟಪಡಿಸಬೇಕು. ಇದನ್ನು ಒಪ್ಪದೆ ತೆರವುದಾರ ಅಧಿಕಾರಿಗಳು ಅತಿಕ್ರಮಿಸಿದರೆ, ರೈತರು ಗಟ್ಟಿ ಧ್ವನಿ ಎತ್ತಬೇಕಾಗುತ್ತದೆ ಅಲ್ವಾ?
GPS ಯಂತ್ರ ಸರಿ ತೋರಿಸುವವರೆಗೆ, ಅಕ್ರಮ ಒತ್ತುವರಿ ಸರ್ವೆಗೆ, ಅರಣ್ಯ ಸರ್ವೆಗೆ, ಕಂದಾಯ ಸರ್ವೆಗಳಿಗೆ ಚೈನ್ ಸರ್ವೇಯೇ ಇರಲಿ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ