ಬಾಗಲಕೋಟೆ ಜಿಲ್ಲೆ ಕರದಂಟೂರು ಅಮೀನಗಡದ ಈರಪ್ಪ ಹೊಕ್ರಾಣಿ ಹಿರಿಯ ರಂಗಜೀವ, ರಂಗ ನಟನಾಗಿ, ನಾಟಕಕಾರನಾಗಿ ಸೇವೆ ಸಲ್ಲಿಸಿದ 88ನೇ ಇಳಿವಯಸ್ಸಿನಲ್ಲಿ ಅರಳು ಹುರಿದಂತೆ ಮಾತನಾಡುತ್ತಾರೆ.
ಸೌಭಾಗ್ಯವತಿ, ಮಾಂಗಲ್ಯ, ಸ್ನೇಹ, ಮೂರು ನಾಟಕದ ಕರ್ತೃ ಸತತ ಮಳೆಯಿಂದ ಮನೆ ಸೋರಿ ಮಳೆ ನೀರಿಗೆ ಇವರ ಹಸ್ತ ಪ್ರತಿಗಳು ನಾಶವಾಗಿ ಹೋಗಿ ಅವು ಮುದ್ರಣವಾಗಲಿಲ್ಲ. ಆಗಿನ ಕಾಲದಲ್ಲಿ ನಾಟಕಾಭಿನಯ, ರಚನೆಗೆ ಮನೆಯವರ ಭಯ ಕಾಡುತ್ತಿತ್ತು. ಮನೆಯವರ ಕಣ್ಣಿಗೆ ಬೀಳದೇ ನಾಟಕ ಪಾತ್ರ ಮಾಡೋದು, ರಚನೆ ಸಾಮಾನ್ಯವಾದ ಕಾಲವದು.
ಉತ್ತಮ ಓದುಗ ಆಗಿರುವ ಈರಪ್ಪಣ್ಣ ಕುವೆಂಪು ರಾಮಾಯಣ ದರ್ಶನ ಓದಿಕೊಂಡಿದ್ದಾರೆ. ಜೊತೆಗೆ ಡಾ. ಡಿ.ಎಸ್. ಕರ್ಕಿ, ಜಿ.ಎಸ್. ಶಿವರುದ್ರಪ್ಪ ಮುಂತಾದ ಸಾಹಿತ್ಯ ಕುರಿತು ಮಾತನಾಡುವ ಇವರ ಪುಸ್ತಕ ಪ್ರೀತಿಗೆ ಕುವೆಂಪು ರಾಮಾಯಣ ದರ್ಶನಂ ಕೃತಿಯನ್ನು ಊರ ತುಂಬಾ ಮೆರವಣಿಗೆ ಮಾಡಿ ಕೃತಜ್ಞತಾ ಭಾವ ಮರೆದಿದ್ದಾರೆ.
ರಂಗಭೂಮಿ ಬಗ್ಗೆ ವಿಶೇಷ ಆಸಕ್ತಿ ಪ್ರೀತಿ ಜೊತೆಗೆ ಧುತ್ತರಗಿ ಯವರ ಒಡನಾಡಿಯಾಗಿ ಅವರ ನಾಟಕ ಕಂಪನಿ ಮೊದಲ ಬಾರಿ ಅಮೀನಗಡದಲ್ಲಿ ಆರಂಭಿಸುವ ಸಂದರ್ಭದಲ್ಲಿ ಮೇದಿಕೇರಿ ಯಮನಪ್ಪ, ವೀರಪ್ಪ ಬೇವಿನಮರದ ಜೊತೆಗೆ ತಿರುಗಾಡಿದ ನೆನಪು ಹಂಚಿಕೊಳ್ಳುತ್ತಾ ಆವಾಗ ಧುತ್ತರಗಿಯವರು ನಮಗೆಲ್ಲ ನೀವು ನನ್ನ ನಾಟಕ ಆಡರೀ ಅಂತ ಅದು ಹೇಳುತ್ತಿದ್ದ ಮಾತು, ಮುಂದೇ ಪಿ.ಬಿ ಧುತ್ತರಗಿ ಕರ್ನಾಟಕ ವೃತ್ತಿ ರಂಗಭೂಮಿಯ ದೊಡ್ಡ ನಾಟಕಕಾರರು ಆಗಿ ಬೆಳೆದಿದ್ದು ಈಗ ಇತಿಹಾಸ.
ಅರವತ್ತು ಎಪ್ಪತ್ತರ ದಶಕದ ಕಲಾವಿದರಲ್ಲಿ ಶ್ರದ್ಧೆ ಪ್ರೀತಿ ಇತ್ತು ಇಂದು ಕಲಾವಿದರಲ್ಲಿ ಮತ್ತು ಪ್ರೇಕ್ಷಕರಲ್ಲಿ ಕಾಣಸಿಗದು. ಕಲಾವಿದರು ಪಾತ್ರದ ಪಾತ್ರ ಆಗುತ್ತಿದ್ದರು. ಜೀವ ತುಂಬಿದ ಅಭಿನಯ ಅವರ ಉಸಿರಾಗಿರುತ್ತಿತ್ತು. ಈಗ ದೊಡ್ಡ ಕಲಾವಿದರು ಬಂದಿದ್ದಾರೆ ಅವರನ್ನು ಚಪ್ಪಾಳೆ ಹೊಡೆದು ಸ್ವಾಗತಿಸಿ ಎನ್ನುತ್ತಾರೆ, ಆಗಿನ ಕಲಾವಿದರು ನಟರು ರಂಗಭೂಮಿ ಬಂದು, ಮಾತು, ರಂಗ ಗೀತೆ ಹಾಡಿದರೆ ಸಾಕು ಚಪ್ಪಾಳೆ ಸುರಿಮಳೆ ಬೀಳುತ್ತಿತ್ತು!
ಪಿ.ಬಿ ಧುತ್ತರಗಿಯವರ ಪತ್ನಿ ಸರೋಜಮ್ಮ ಧುತ್ತರಗಿ "ಸುಮ್ಮನೇ ನಂಬು ಈಗ ಗುರು ಪಾದವ ಹೆಮ್ಮೆಯಿಂದ ಫಲವಿಲ್ಲ ಎಲೇ ಮಾನವ" ಎಂಬ ರಂಗಗೀತೆ ಹಾಡಿದರೇ ಸಾಕು ಜನ ಮನತುಂಬಿ ಹಾರೈಸಿ ಚಪ್ಪಾಳೆ ತಟ್ಟುತ್ತಿದ್ದರು.
ಎಲ್ಲದಕ್ಕೂ ಗುರು ಪ್ರೇರಣೆ, ಕೃಪೆ ಬೇಕು ಎನ್ನುವ ಅವರು ಇಂದು ಸಂಸ್ಕಾರಯುತ ಶಿಕ್ಷಣ ಸಿಗುತ್ತಿಲ್ಲ; ಜನರಲ್ಲಿ ಕಾಣಸಿಗುತ್ತಿಲ್ಲವೆಂದು ಬೇಸರ ವ್ಯಕ್ತ ಪಡಿಸಿದರು. 88ರ ಹದಿಹರೆಯದ ಹೊಕ್ರಾಣಿಯವರು ನಿತ್ಯ ಅಧ್ಯಯನ, ಆಧ್ಯಾತ್ಮಿಕ ಪ್ರವಚನದಲ್ಲಿ ತೊಡಗಿಕೊಂಡಿದ್ದಾರೆ.
- ಮಲ್ಲಿಕಾರ್ಜುನ ಎಂ ಸಜ್ಜನ
ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು
ತಾಲೂಕು ಘಟಕ ಹುನಗುಂದ
ರಂಗ ಸಂಘಟಕ ಶೂಲೇಭಾವಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ