ಪಣಜಿ: ಗೋವಾದಲ್ಲಿ ಕನ್ನಡ ಉಳಿಯಬೇಕು, ಕನ್ನಡ ಬೆಳೆಯಬೇಕು. ಇದಕ್ಕಾಗಿ ಗೋವಾದಲ್ಲಿ ದೊಡ್ಡದಾಗಿ ಶಿಕ್ಷಣ ಕ್ರಾಂತಿಯಾಬೇಕಿದೆ. ಎಲ್ಲೆಲ್ಲಿ ಕನ್ನಡಿಗರಿಗೆ ಆರ್ಥಿಕ ಅವಶ್ಯಕತೆಯಿದೆ ಅಲ್ಲಿ ನಾವು ನೀವೆಲ್ಲ ಸೇರಿ ಕನ್ನಡಿಗರ ಒಳಿತಿಗಾಗಿ ಶ್ರಮಿಸಬೇಕು ಎಂದು ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ ನುಡಿದರು.
ಗೋವಾ ವಾಸ್ಕೊದ ಜುವಾರಿನಗರದ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಮೋಹನ್ ಶೆಟ್ಡಿಯವರು ಉಚಿತ ಸಮವಸ್ತ್ರ ,ಬ್ಯಾಗ್ ಮತ್ತು ಪುಸ್ತಕ ವಿತರಣೆ ಮಾಡಿ ಮಾತನಾಡುತ್ತಿದ್ದರು. ಸರ್ಕಾರಿ ಶಾಲೆ ಎಂದರೆ ಹೆಚ್ಚಾಗಿ ಬಡವರ ಮಕ್ಕಳು ಇರುತ್ತಾರೆ. ಇಂತಹ ಶಾಸಲೆಗಳಲ್ಲಿ ಇಂತಹ ಶೈಕ್ಷಣಿಕ ಕಾರ್ಯಕ್ರಮ ಮಾಡಿದಾಗ ಪ್ರೋತ್ಸಾಹ ಮಾಡುವ ಅಗತ್ಯವಿದೆ ಎಂದು ಮುರಳಿ ಮೋಹನ್ ಶೆಟ್ಟಿ ನುಡಿದರು. ಮಕ್ಜಳಿಗೆ ನಮ್ಮ ಭಾರತೀಯ ಸಂಸ್ಕಾರ ನೀಡಬೇಕು. ಮಕ್ಕಳು ಆಧ್ಯಾತ್ಮದ ಕಡೆಗೆ ಆಸಕ್ತಿ ಬೆಳೆಸುವ ಹಾಗೆ ಪ್ರೋತ್ಸಾಹ ನೀಡಬೇಕು ಎಂದು ಮಕ್ಕಳ ಪಾಲಕರಿಗೆ ಮೋಹನ್ ಶೆಟ್ಟಿ ಕರೆ ನೀಡಿದರು.
ಉದ್ಯಮಿ ವಿಜಯ್ ಶೆಟ್ಟಿ, ವಿನೋದ ರಾಹಿ ರವರು ಬ್ಯಾಗ್,ಪುಸ್ತಕ, ಕಂಪಾಸ ಖರೀದಿಸುವಲ್ಲಿ ಆರ್ಥಿಕ ಸಹಾಯ ಮಾಡಿದ್ದರು. ಉದ್ಯಮಿ ನವೀನ್ ಶೆಟ್ಟಿ, ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಜುವಾರಿನಗರ ಶಾಖಾ ಸಮೀತಿಯ ಅಧ್ಯಕ್ಷ ರುದ್ರಯ್ಯ ಹಿರೇಮಠ, ಅಖಿಲ ಗೋವಾ ಶ್ರೀ ನಿಜಶರಣ ಹಡಪದ ಅಪ್ಪಣ್ಣ ಬಳಗದ ಅಧ್ಯಕ್ಷ ಮಹೇಶ್ ಬಳಬಟ್ಟಿ, ಕನ್ನಡ ಶಾಲೆಯ ಮುಖ್ಯ ಗುರುಗಳಾದ ದಯಾ ನಾಯಕ್, ಡಾ. ಬಾಬಸಾಹೇಬ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಚಂದ್ರಶೇಖರ ಬಿಂಗಿ, ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಕಾರ್ಯದರ್ಶಿ ದಾವಲಸಾಬ್ ನದಾಫ್, ರಾಘು ಅಂಬಿಗೇರ, ಹನುಮಂತ ಚಿಮ್ಮಲ, ರಮೇಶ ಮುಳ್ಳೂರ, ಮಾರುತಿ ಬಿಂಗಿ, ಶಿವಾನಂದ ಮಸಬಿನಾಳ, ಕನ್ನಡ ಶಾಲೆಯ ಹಿರೀಯ ಶಿಕ್ಷಕ ವಿಟಿ ಅರೆಬೆಂಚಿ, ಶ್ರಾವಣ ಹಿರೇಮಠ, ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಪ್ರಮುಖರು, ಶಿಕ್ಷಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ