ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳಕ್ಕೆ ಪ್ರವಾಹ ರಕ್ಷಣಾ ಸಾಮಗ್ರಿ ವಿತರಣೆ

Upayuktha
0


ಮಂಗಳೂರು: ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ  ಪ್ರಾಕೃತಿಕ  ದುರಂತಗಳನ್ನು ಪರಿಣಾಮಕಾರಿಯಾಗಿ  ಎದುರಿಸಲು ಜನರನ್ನು ರಕ್ಷಿಸಲು ಮತ್ತು  ಆಸ್ತಿಪಾಸ್ತಿ ರಕ್ಷಣೆಗೆ  ಸಹಾಯ ಮಾಡುವ ಉದ್ದೇಶದಿಂದ  ದ.ಕ. ಜಿಲ್ಲಾ  ಗೃಹರಕ್ಷಕ ದಳಕ್ಕೆ ಜಿಲ್ಲಾಧಿಕಾರಿ ಕಛೇರಿಯಿಂದ  ನೀಡಲಾದ ರೈನ್‌ಕೋಟ್ ಹಾಗೂ ಗಮ್ ಬೂಟ್‌ಗಳನ್ನು ಪ್ರವಾಹ ರಕ್ಷಣಾ ಕರ್ತವ್ಯ ನಿರ್ವಹಿಸುವ ಘಟಕಾಧಿಕಾರಿಗಳಿಗೆ ಹಾಗೂ ಗೃಹರಕ್ಷಕರಿಗೆ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ  ಡಾ|| ಮುರಲೀಮೋಹನ್  ಚೂಂತಾರು ಇವರು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ. ಹಾಗೂ ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿ  ಹರಿಶ್ಚಂದ್ರ ಕೆ., ಗೃಹರಕ್ಷಕರಾದ ಸುನಿಲ್ ಕುಮಾರ್, ನವೀನ್, ಧನಂಜಯ, ರಾಜೇಶ್ ಗಟ್ಟಿ, ಜೀವನ್ ಕುಮಾರ್, ಸಂಜಯ್, ಚಂದ್ರಶೇಖರ್, ಜ್ಞಾನೇಶ್, ಅರವಿಂದ್  ಮುಂತಾದವರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top