ತಾಯಿ ಭಾರತಿ ತನ್ನ ಮಡಿಲೊಳಗೆ ಅನೇಕ ವೀರ ಕಲಿಗಳಿಗೆ ಜನ್ಮ ನೀಡುತ್ತಾ ಬಂದಿದ್ದಾಳೆ. ಸ್ವಾಭಿಮಾನದ ಬದುಕು ಬದುಕಿ ಧರ್ಮದ ಮಾರ್ಗದಲ್ಲಿ ನಡೆದು ನಮ್ಮ ಬಿಸಿರಕ್ತದ ತರುಣರಿಗೆ ದೇಶಭಕ್ತಿಯ ಪಾಠ ಕಲಿಸಿ ಈ ನಾಡನ್ನು ಇಂದಿಗೂ ಬೆಳಗುತ್ತಿದ್ದಾರೆ. ನಾವು ಎಂದಿಗೂ ಮರೆಯಲಾಗದ ಮಹಾಧೃವತಾರೆಗಳಲ್ಲಿ ಬಾಲಕ ಪುರುಷ ಸಿಂಹರಾದ ಸಿಖರ ಗುರು ತೇಜ್ ಬಹುದೂರರ ಮಕ್ಕಳಾದ ಜುಲಾವರ್ಸಿಂಹ ಪತೇಸಿಂಹರು ನಮಗೆ ಆದರ್ಶಪ್ರಾಯರು. ಒಂದು ಬಾರಿ ಮೊಘಲ್ ಸುಲ್ತಾನ ಔರಂಗಜೇಬನು ಸಿಖರ ಮೇಲೆ ದಾಳಿ ಮಾಡುತ್ತಾನೆ. ಆಗ ಜಲಾವರಸಿಂಹ ಪತೇಸಿಂಹರು ಆ ಮೊಘಲ್ ಸೈನ್ಯಕ್ಕೆ ಸೆರೆ ಸಿಗುತ್ತಾರೆ ಆಗ ಆ ಎರಡು ಮಕ್ಕಳನ್ನು ಔರಂಗಜೇಬನ ಎದುರು ತಂದು ನಿಲ್ಲಿಸುತ್ತಾರೆ. ಆ ಸುಲ್ತಾನನು ಮಕ್ಕಳಿಗೆ ಹೇಳುತ್ತಾನೆ- ನೀವು ಮತಾಂತರವಾದರೆ ನಿಮ್ಮನ್ನ ಬಿಡುತ್ತೇನೆ ಇಲ್ಲವಾದರೆ ನಿಮ್ಮನ್ನು ಕೊಂದು ಹಾಕುವೆ ಎನ್ನುತ್ತಾನೆ. ಎರಡು ಪುಟ್ಟ ಮಕ್ಕಳು ನಾವು ತೇಜ್ ಬಹುದೂರರ ಮಕ್ಕಳು ಪ್ರಾಣ ಕೊಡುತ್ತೇವೆಯೇ ಹೊರತು ಯಾವುದೇ ಕಾರಣಕ್ಕೂ ಧರ್ಮ ಬಿಡಲಾರೆವು ಎಂದಾಗ ಆ ಮತಾಂಧ ಸುಲ್ತಾನನು ಅವರಿಬ್ಬರನ್ನು ಜೀವಂತವಾಗಿ ನಿಲ್ಲಿಸಿ ಗೋಡೆ ಕಟ್ಟಿ ಮುಚ್ಚಬೇಕೆನ್ನುವ ಆಜ್ಞೆ ನೀಡುತ್ತಾನೆ. ಸೈನಿಕರು ಅವರಿಬ್ಬರನ್ನು ಜೀವಂತವಾಗಿ ನಿಲ್ಲಿಸಿ ಅವರ ಸುತ್ತಲೂ ಗೋಡೆಕಟ್ಟಲು ಪ್ರಾರಂಭಿಸುತ್ತಾರೆ.
ಆ ಇಬ್ಬರೊಳಗೆ ಚಿಕ್ಕವನಾದ ಪಥೇಸಿಂಹನ ಕುತ್ತಿಗೆಯ ಭಾಗಕ್ಕೆ ಕಟ್ಟಡ ಬರುತ್ತದೆ. ಆಗ ಅಣ್ಣನಾದ ಜುಲಾವರನ ಕಣ್ಣಲ್ಲಿ ನೀರು ಆ ನೀರಿನ ಹನಿ ತಮ್ಮ ಪಥೇಸಿಂಹನ ಮೇಲೆ ಬೀಳುತ್ತದೆ. ಆಗ ತಮ್ಮ ಅಣ್ಣನಿಗೆ ಹೇಳುತ್ತಾನೆ- ಅಣ್ಣಾ ನೀನು ಸಾವಿಗೆ ಹೆದರಿ ಕಣ್ಣೀರು ಹಾಕುತ್ತಿರುವೆಯಾ? ನೀನು ಹೇಡಿಯಾಗಿದ್ದರೆ ಅವರ ಮಾತಿನಂತೆ ನಡೆದುಕೊಳ್ಳಬಹುದಿತ್ತಲ್ಲ. ಆಗ ಅಣ್ಣ ತಮ್ಮನಿಗೆ ಹೇಳುತ್ತಾನೆ ಪತ್ತೇ ನಾನು ಸಾವಿನ ಭಯದಿಂದ ಕಣ್ಣೀರು ಹಾಕುತ್ತಿಲ್ಲ. ಬದಲಿಗೆ ನಾನು ಮೊದಲು ಹುಟ್ಟಿದವನು ನಿನಗಿಂತ ದೊಡ್ಡವನು ಧರ್ಮಕ್ಕಾಗಿ ನಾನೇ ಮೊದಲು ಪ್ರಾಣ ಕೊಡಬೇಕೆಂದುಕೊಂಡಿದ್ದೆ. ಆದರೆ ನನಗಿಂತ ಚಿಕ್ಕವನಾಗಿ ಹುಟ್ಟಿ ಅದರ ಶ್ರೇಯಸ್ಸನ್ನು ನೀನು ಪಡೆಯುತ್ತಿರುವೆಯಲ್ಲ ಎಂದು ದುಃಖವಾಗುತ್ತಿದೆ ಎಂದಾಗ ಅಲ್ಲಿ ಸುತ್ತಲೂ ನೆರೆದಿರುವ ಸೈನಿಕರ ಕಣ್ಣಂಚಲ್ಲಿ ನೀರು ತುಂಬಿತ್ತು.
ಆ ಮಕ್ಕಳ ಸ್ವಾಭಿಮಾನ ಕಂಡು ಎಲ್ಲರೂ ಅವರೆದುರು ತಲೆಬಾಗಿಸಿದ್ದರು. ಈ ಭೂಮಿಯಲ್ಲಿ ಮಾತ್ರ ಇಂತಹ ಘಟನೆಗಳು ನೋಡಲು ಸಿಗುವುದು ನಮ್ಮ ಕನ್ನಡ ನಾಡಲ್ಲಿಯೂ ಅಂತಹ ಅನೇಕ ವೀರ ಪುತ್ರರು ಜನ್ಮವೆತ್ತಿ ತಾಯಿ ಭಾರತೀಯಗಾಗಿ ಸಮರ್ಪಣೆಗೊಂಡರು. ಈಸೂರು ಎಂಬ ಒಂದು ಪುಟ್ಟ ಹಳ್ಳಿಯ ಜನ ಎಸೂರು ಬಿಟ್ಟರೂ ಈಸೂರು ಬಿಡೆವು ಎಂದು ಬ್ರಿಟಿಷರ ವಿರುದ್ಧ ಘಂಟಾಘೋಷವಾಗಿ ಹೇಳಿದರು. ಅಂದರೆ ನಮ್ಮ ಪ್ರಾಣವನ್ನ ಬಿಡುತ್ತೇವೆ ಹೊರತು ನಮ್ಮ ಹಳ್ಳಿಯನ್ನು ಬಿಡಲಾರೆವು ಎಂದು ತಾಯಂದಿರು ಮಕ್ಕಳು, ತರುಣರ ಜೊತೆಗೆ ವಯೋವೃದ್ದರೂ ಊರ ಕಾವಲಿಗೆ ನಿಂತರು ನಮ್ಮ ಹಲಗಲಿ ಬೇಡರಂತು ಸ್ವಾಭಿಮಾನದ ಪ್ರತೀಕದಂತಿರುವ ಶಸ್ತ್ರಗಳನ್ನು ಯಾವುದೇ ಕಾರಣಕ್ಕೂ ಬ್ರಿಟಿಷರಿಗೆ ಒಪ್ಪಿಸಲಾರೆವು ಎಂದು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಈ ನಾಡಿನ ಇತಿಹಾಸದ ಪುಟದಲ್ಲಿ ಅಜರಾಮರರಾಗಿ ಉಳಿದಿದ್ದಾರೆ ಅನೇಕರು ತಮ್ಮ ಮನೆಯ ಸಂಸಾರಗಳನ್ನು ಬಿಟ್ಟು ಈ ದೇಶ ಕಟ್ಟಲು ತಮ್ಮಣ್ಣೆ ತಾವು ಅರ್ಪಿಸಿಕೊಂಡು ಮಹಾಯೋಗಿ ಗಳಾಗಿದ್ದಾರೆ. ನಮ್ಮ ದೇಶದ ವೀರರನ್ನು ನಾವು ಮರೆತರೆ ನಮ್ಮಂತ ಕೃತಜ್ಞಾಹೀನರು ಮತ್ಯಾರು ಇರಲಾರರು. ಅದಕ್ಕಾಗಿ ಸದಾ ಕಾಲ ಅವರನ್ನು ನೆನೆಯೋಣ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ