ನಿಟ್ಟೆ ಸ್ಕೂಲ್ ಆಫ್‌ ಫ್ಯಾಶನ್ ಟೆಕ್ನಾಲಜಿ ಆ್ಯಂಡ್ ಇಂಟೀರಿಯರ್ ಡಿಸೈನ್‌ನ ಘಟಿಕೋತ್ಸವ

Upayuktha
0

ವೃತ್ತಿಯ ಸವಾಲುಗಳನ್ನು ಎದುರಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು: ಕ್ಯಾಪ್ಟನ್ ಕೌಸ್ತುವ್‌ನಾಥ್



ಬೆಂಗಳೂರು: ‘ನೂತನವಾಗಿ ಪದವಿ ಗಳಿಸಿವರು ವೃತ್ತಿ ಬದುಕಿಗೆ ಪದಾರ್ಪಣ ಮಾಡುವ ಸಂದರ್ಭದಲ್ಲಿ, ಅನೇಕ ಸವಾಲುಗಳನ್ನು ಏದುರಿಸಬೇಕಾಗುತ್ತದೆ. ಆ ಸವಾಲುಗಳು ಪ್ರಸ್ತುತ ಸಂದರ್ಭದಲ್ಲಿ ಸಹಜ ಅನ್ನಿಸಿದರೂ ಅವುಗಳನ್ನು ಯಶಸ್ವಿಯಾಗಿ ಎದುರಿಸುವ ಕೌಶಲ್ಯವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ‘ಒಮ್ಮೆ ಕಲಿತರೆ ಸಾಕು, ನಿರಂತರವಾಗಿ ಗಳಿಸಬಹುದು’ ಎಂಬ ಕಾಲ ಗತಿಸಿದೆ. ಬದಲಾಗುತ್ತಿರುವ ತಂತ್ರಜ್ಞಾನದ ಗತಿಗೆ ಅನುಗುಣವಾಗಿ ನಮ್ಮ ಕಲಿಕೆಯೂ ಸಾಗಬೇಕು. ಆಗ ಮಾತ್ರ ಸವಾಲುಗಳ ಈ ಯುಗದಲ್ಲಿ ಪ್ರಸ್ತುತರಾಗಿ ಉಳಿಯಲು ಸಾಧ್ಯ’ ಎಂದು ಎಂ.ಪಿ.ಎ.ಎಸ್.ಎಲ್‌ನ ಸಂಸ್ಥಾಪಕ ಕ್ಯಾಪ್ಟನ್ ಕೌಸ್ತುವ್‌ನಾಥ್ ನುಡಿದರು.


ಅವರು ನಿಟ್ಟೆ ಸ್ಕೂಲ್ ಆಫ್‌ ಫ್ಯಾಶನ್ ಟೆಕ್ನಾಲಜಿ ಆ್ಯಂಡ್ ಇಂಟೀರಿಯರ್ ಡಿಸೈನ್‌ನ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.


ಬಿ.ಎಸ್ಸಿ ಪದವಿಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಗಳಿಸಿದ ಆರು ಜನರಿಗೆ ಹಾಗೂ ಎಂ.ಎಸ್ಸಿ ಪದವಿಯಲ್ಲಿ ರ‍್ಯಾಂಕ್‌ ಗಳಿಸಿದ ಐವರಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಅವರಲ್ಲಿ ಎನ್. ಚೈತ್ರ ಬಿ.ಎಸ್ಸಿ ಫ್ಯಾಶನ್ ಆ್ಯಂಡ್ ಅಪೆರೆಲ್ ಡಿಸೈನ್ ಪದವಿಯಲ್ಲಿ ಎಂಟನೇ ಸ್ಥಾನ ಪಡೆದರೆ, ಪ್ರಿಯಾ ವಿ.ಬಿ. ಎಂ.ಎಸ್ಸಿ ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೊರೇಶನ್ ಪದವಿಯಲ್ಲಿ ಮೊದಲ ಸ್ಥಾನ ಪಡೆದರು. ವಿವಿಧ ಕ್ಷೇತ್ರಗಳಲ್ಲಿ ಕುಶಲತೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು.


ಸಂಸ್ಥೆಯ ಪ್ರಾಶುಪಾಲರಾದ ಡಾ. ಸಂಧ್ಯಾ ರವಿ ಅವರು ನೂತನ ಪದವೀಧರರಿಗೆ ನೈತಿಕತೆಯ ಪ್ರತಿಜ್ಞಾವಿಧಿ ಬೋಧಿಸಿದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್.ಸಿ. ನಾಗರಾಜ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ, ‘ನೂತನ ಪದವೀಧರರು ಸದಾ ಸಕಾರಾತ್ಮಕ ಧೋರಣೆಯನ್ನು ತಮ್ಮ ನಡೆನುಡಿಗಳಲ್ಲಿ ಅಳವಡಿಸಕೊಳ್ಳಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ’, ಎಂದರು.


ನಂತರ ನಡೆದ ಫ್ಯಾಶನ್ ಶೋ ಹಾಗೂ ಇತರೆ ಪ್ರದರ್ಶನಗಳು ಜನಸ್ತೋಮವನ್ನು ರಂಜಿಸುವಲ್ಲಿ ಯಶಸ್ವಿಯಾದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top