ಬೆಂಗಳೂರು: 'ಲಂಗೋಟಿ ಮ್ಯಾನ್` ಕನ್ನಡ ಚಲನಚಿತ್ರದ ಟ್ರೈಲರಿನಲ್ಲಿ ಒಬ್ಬ ಜನಿವಾರಧಾರಿ ಮತ್ತು ಲಂಗೋಟಿ ಹಾಕಿರುವ ಬ್ರಾಹ್ಮಣ ವ್ಯಕ್ತಿಯನ್ನು ಹಾಸ್ಯಸ್ಪದವಾದ ರೀತಿಯಲ್ಲಿ ತೋರಿಸಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಲಂಗೋಟಿ ಮ್ಯಾನ್’ ಚಲನಚಿತ್ರವನ್ನು ಹಿಂದೂ ಜನಜಾಗೃತಿ ಸಮಿತಿ ಬಹಿಷ್ಕರಿಸುತ್ತದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈ ಚಲನಚಿತ್ರ ವಿರುದ್ಧ ಸೆನ್ಸಾರ್ ಮಂಡಳಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮುಂಬರುವ ಚಲನಚಿತ್ರಗಳಲ್ಲಿ ದೇವರ ಮತ್ತು ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ನೋಡಬೇಕು' ಎಂದು ಮನವಿ ಮಾಡಿದರು.
ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ಚಿತ್ರಗಳಿಗೆ ಅನುಮತಿ ನೀಡಲಾಗುತ್ತಿದೆ. 'ರಾಮನ ಅವತಾರ' ಈಗ `ಲಂಗೋಟಿ ಮ್ಯಾನ್' ಈ ಚಿತ್ರಗಳಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ದೇವರು ಮತ್ತು ಸಂಸ್ಕೃತಿಯನ್ನು ಗುರಿ ಮಾಡಿ ಹೆಸರಿಸಲಾಗಿದ್ದು, ವಾಸ್ತವದಲ್ಲಿ ಇಂತಹ ವಿವಾದಗಳು ಏಳದಂತೆ ಮುತುವರ್ಜಿ ವಹಿಸಿವುದು ಸೆನ್ಸಾರ್ ಮಂಡಳಿಯ ಜವಾಬ್ದಾರಿಯಾಗಿದೆ. ಈ ರೀತಿಯ ಚಿತ್ರಗಳಿಗೆ ಅನುಮತಿ ನೀಡುವುದೆಂದರೆ ಮಂಡಳಿಯ ಬೇಜವಾಬ್ದಾರಿಯಾಗಿದೆ. ಹಿಂದೂ ಸಮಾಜ ಇದನ್ನು ಎಂದಿಗೂ ಸಹಿಸುವುದಿಲ್ಲ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ