ಬೆಳ್ತಂಗಡಿ: "ನಮ್ಮ ಪೂರ್ವಜರಿಗೆ ಆಟಿ ತಿಂಗಳ ಬದುಕು ಆರ್ಥಿಕವಾಗಿ ಬಹಳ ಸಂಕಷ್ಟದ ಬದುಕು. ರೋಗ ರುಜಿನಗಳು ಕಾಡುವ ಕಾಲ. ಇಡೀ ವರ್ಷದಲ್ಲಿ ಬರುವ ಕಾಯಿಲೆ ಕಸಾಲೆಗಳನ್ನು ಪರಿಹರಿಸುವ ಶಕ್ತಿ ಸತ್ವವನ್ನು ಅವರು ಪಾಲೆಕೆತ್ತೆಯಲ್ಲಿ ಗುರುತಿಸಿ ಬಳಸಿ ನಿರೋಗಿಗಳಾದರು. ಇದು ಮೂಢನಂಬಿಕೆ ಅಲ್ಲ. ಮೂಲ ನಂಬಿಕೆ" ಎಂದು ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಹೇಳಿದರು.
ಅವರು ನಡ ಸರಕಾರೀ ಪದವಿ ಪೂರ್ವ ಕಾಲೇಜಿನ ಆಟಿಡೊಂಜಿ ಕೂಟ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಭತ್ತದ ಕಳಸೆಯಲ್ಲಿ ತೆಂಗಿನ ಸಿರಿಯನ್ನು ಅರಳಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಇವರು ವಹಿಸಿಕೊಂಡು "ಹಳೇ ಕಾಲದ ಸಂಪ್ರದಾಯಗಳಲ್ಲಿ ಸತ್ವವೂ ಇದೆ. ವೈಜ್ಞಾನಿಕತೆಯೂ ಇದೆ. ಇದನ್ನು ಮುಂದುವರೆಸಿ ಕೊಂಡು ಹೋಗುವುದರಲ್ಲಿ ನಮ್ಮ ಬದುಕಿನ ಸಾರ್ಥಕತೆ ಇದೆ" ಎಂದು ಕರೆ ನೀಡಿದರು.
ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಂಜುಳಾ, ಕೊಯ್ಯೂರು ಸ.ಪ.ಪೂ.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮೋಹನ್ ಗೌಡ, ಹಿರಿಯ ಉಪನ್ಯಾಸಕಿ ಶ್ರೀಮತಿ ಲಿಲ್ಲಿ ಪಿ.ವಿ., ಕಾಲೇಜು ವಿದ್ಯಾರ್ಥಿ ನಾಯಕ ರಕ್ಷಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಪವಿತ್ರ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುಕೇತ ಸ್ವಾಗತಿಸಿ, ಶ್ರೀಮತಿ ಚೇತನಿ ವಂದಿಸಿದರು.
ಈ ಸಂದರ್ಭದಲ್ಲಿ ಯದುಪತಿ ಗೌಡ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಶ್ರೀಮತಿ ವಸಂತಿ ಪಿ. ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ತುಳು ನಾಡು ನುಡಿಯನ್ನು ಬಿಂಬಿಸುವ ಮನರಂಜನಾ ಕಾರ್ಯಕ್ರಮ ಜರುಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ