ಬಳ್ಳಾರಿ:ಬಳ್ಳಾರಿಯ ಆರ್ಯ ವೈಶ್ಯ ಅಸೋಸಿಯೇಷನ್ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಜಂಟಿಯಾಗಿ ಬಳ್ಳಾರಿಯಲ್ಲಿ ಆಗಸ್ಟ್ 18ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಾಸವಿ ಕಲ್ಯಾಣ ಮಂಟಪ, ಶ್ರೀ ಕನ್ನಿಕಾ ಪರಮೇಶ್ವರಿ ಟೆಂಪಲ್ ರಸ್ತೆ, ಬಳ್ಳಾರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದೆ. ಹೃದ್ರೋಗ ತಜ್ಞ ಡಾ. ಮಲ್ಲಿಕಾರ್ಜುನ, ಮೂತ್ರಶಾಸ್ತ್ರ ತಜ್ಞ ಡಾ. ಪಾರ್ಥಸಾರಥಿ, ಕ್ಯಾನ್ಸರ್ ತಜ್ಞ ಡಾ. ಸರವಣರೆಡ್ಡಿ, ಆರ್ಥೋ ವೈದ್ಯಕೀಯ ಮತ್ತು ನರವಿಜ್ಞಾನ ತಜ್ಞ ಡಾ. ಫೈಜ್ ಮತ್ತು ಜನರಲ್ ಸರ್ಜನ್ ಡಾ. ಹರಿಚರಣ್ ಅವರು ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ 94484 68676ಗೆ ಕರೆ ಮಾಡಲು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ