ಬಳ್ಳಾರಿ: ತಾಲೂಕಿನ ಹಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಳ್ಳಿ ತಾಂಡದಲ್ಲಿನ ಪವಾಡಗಳ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರಸ್ವಾಮಿವಯವರ 18 ನೇ ವರ್ಷದ ಶ್ರಾವಣ ಮಾಸದ 12.08.2024 ರ ಎರಡನೇ ಸೋಮವಾರದ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಧರ್ಮಕರ್ತರಾದ ವಕೀಲ ಡಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯನ್ನು ನೀಡಿ, ದಿನಾಂಕ 11.08.2024 ಭಾನುವಾರದಂದು ಸಂಜೆ 5 ಗಂಟೆ ಯಿಂದ ಭಜನಾ ಕಾರ್ಯಕ್ರಮ ಪ್ರಾರಂಭಗೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಟಿ ಶ್ರೀನಿವಾಸ್ ರಾವ್ ಅಧ್ಯಕ್ಷರು ಕರ್ನಾಟಕ ಸ್ಪಾಂಜ್ ಐರನ್ ಅಧ್ಯಕ್ಷರಾದ ಬಳ್ಳಾರಿ ಮತ್ತು ಬೆಂಗಳೂರು ಇವರು ಮತ್ತು ತಾಯಮ್ಮ ಬಸವರಾಜ್ ಹಲಕುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷ ಸುವರ್ಣ ಹೊನ್ನೂರಸ್ವಾಮಿ, ಹಲಕುಂದಿ ಗ್ರಾಮ ಪಂಚಾಯಿತಿ ಪಿ.ಡಿ.ಒ ಪ್ರಭಾಕರ್ ಮತ್ತು ಪಟೆಲ್ ರಾಮ ನಾಯಕ್ , ಹೊನ್ನಳ್ಳಿ ತಾಂಡದ ಮುಖಂಡರುಗಳು ಸೇರಿದಂತೆ ಕರಿಬಸವಜ್ಜಯ್ಯನ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗುಗ್ಗರಹಟ್ಟಿಯ ಶ್ರೀ ರುಕ್ಮೀಣಿ ಪಾಂಡುರಂಗ ಭಜನಾ ಮಂಡಳಿಯವತಿಯಿಂದ ಭಜನಾ ಪೂಜೆಯನ್ನು ಏರ್ಪಡಿಸಲಾಗಿರುತ್ತದೆ. ದಿನಾಂಕ 12.08.2024 ರಂದು ಮುಂಜಾನೆ 8.00 ಗಂಟೆಯಿಂದ ಗಂಗೆ ಪೂಜೆ ದೊಳ್ಳು ಕುಣಿತ ಹಾಗೂ ಮಹಾ ಮಂಗಳಾರತಿ ಜರುಗುವುದು. ನಂತರ ಅನ್ನ ಪ್ರಸಾದ ಕಾರ್ಯಕ್ರಮವು ಜರುಗುವುದು, ಸಕಲ ಭಕ್ತಾಧಿಗಳು ಶ್ರೀ ಗುರು ಕರಿಬಸವೇಶ್ವರ ಹಾಗೂ ಶ್ರೀ ಹೇಮಜ್ಜಯ್ಯನ ದೇವಸ್ಥಾನಕ್ಕೆ ಬಂದು ಪ್ರಸಾದವನ್ನು ಸ್ವೀಕರಿಸಿ ಆಶೀರ್ವಾದವನ್ನು ಪಡೆಯಬೇಕೆಂದು ಸರ್ವ ಭಕ್ತಾದಿಗಳಲ್ಲಿ ದೇವಸ್ಥಾನ ಮತ್ತು ಶ್ರೀ ಗುರು ಕರಿಬಸವಜ್ಜಯ್ಯ ಮತ್ತು ಅಜ್ಜಯ್ಯ ಮತ್ತು ಶ್ರೀ ಹೇಮಜ್ಜಯ್ಯ ಸೇವಾ ಸಮಿತಿಯ ಅಧ್ಯಕ್ಷ ಡಿ. ಮಲ್ಲಿಕಾರ್ಜುನ, ವಕೀಲರು ಇವರು ಸರ್ವರಿಗೂ ಸುಸ್ವಾಗತ ಕೋರಿದ್ದಾರೆ.
ಸಕಲ ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಬಂದು ಶ್ರೀ ಗುರು ಕರಿಬಸವಜ್ಜಯ್ಯನ ಕೃಪೆಗೆ ಪಾತ್ರರಾಗ ಬೇಕೆಂದು ಅವರು ಅಜ್ಜಯ್ಯನ ಸಕಲ ಭಕ್ತಾಧಿಗಳಲ್ಲಿ ಮನವಿ ಮಾಡಿದ್ದಾರೆ. ಇಲ್ಲಿಗೆ ಭೇಟಿ ಕೊಟ್ರೆ ಸಾಕು ಕಷ್ಟಗಳೆಲ್ಲಾ ಬಗೆಹರಿಯುತ್ತವೆ ಅನ್ನೋ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಜ್ಜಯ್ಯ ಸ್ವಾಮಿಯ ದರ್ಶನ ಪಡೆಯಲು ಸಾವಿರಾರು ಮಂದಿ ಭೇಟಿ ಕೊಡ್ತಾರೆ.
ಹೀಗೆ ಭೇಟಿ ಕೊಟ್ರೆ ದೆವ್ವ, ಭೂತದ ಕಾಟದಿಂದ ಮುಕ್ತಿ ಪಡೆಯುತ್ತಾರೆ ಅನ್ನೋ ನಂಬಿಕೆ ಕೂಡ ಭಕ್ತರಲ್ಲಿ ಮನೆಮಾಡಿದೆ. ಇನ್ನು ಅಮವಾಸ್ಯೆಯ ದಿನ ಭಕ್ತರು ಭಾರಿ ಸಂಖ್ಯೆಯಲ್ಲಿ ನೆರೆದಿರುತ್ತಾರೆ. ಮಾನಸಿಕ ಕಾಯಿಲೆಗಳಿಂದ ಬಳಲುವ ಹಾಗೂ ಪ್ರೇತ, ಭೂತ ಹಿಡಿದಿದೆ ಅನ್ನೋ ಮನಸ್ಥಿತಿಯ ಜನರಿಗೆ ಇಲ್ಲಿ ಪರಿಹಾರ ದೊರೆಯುವುದೆಂದು ಸಾವಿರಾರು ಜನ ಭಕ್ತಾಧಿಗಳು ಹೇಮಜ್ಜಯ್ಯ ಸ್ವಾಮಿಯ ದರ್ಶನ ಪಡೆದು ಕಷ್ಟಗಳಿಂದ ಮುಕ್ತರಾಗುತ್ತಾರೆ ಅನ್ನೋ ಪ್ರತೀತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಸ್ವಾಮಿಯ ದರ್ಶನ ಪಡೆದ್ರೆ ತಮ್ಮ ಕಷ್ಟಗಳೆಲ್ಲಾ ಕಳೆದು ಹೋಗುತ್ವೆ ಅನ್ನೋ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಭಕ್ತರಿಗಾಗಿ ಶ್ರೀಕ್ಷೇತ್ರದಲ್ಲಿ ಸಕಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿರುತ್ತದೆ ಎಂದು ಡಿ.ಮಲ್ಲಿಕಾರ್ಜುನ.ವಕೀಲರು ತಿಳಿಸಿರುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ