ಬೆಂಗಳೂರು: ಬ್ಯಾರಿ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಯಕ್ಷಗಾನ ಪ್ರಸಂಗ ಆಯೋಜನೆ

Upayuktha
0


ಮಂಗಳೂರು: ಬೆಂಗಳೂರಿನ H.B.R ಬಡಾವಣೆಯಲ್ಲಿರುವ ಬ್ಯಾರಿಸ್ ಸೌಹಾರ್ದ ಭವನದಲ್ಲಿ ಆಗಸ್ಟ್‌ 23ರಂದು ಶುಕ್ರವಾರ ಸಂಜೆ ಹೈಕೋರ್ಟ್ ಯಕ್ಷಗಾನಾಭಿಮಾನಿ ವಕೀಲರು ಬೆಂಗಳೂರು ಬ್ಯಾರಿ ವೆಲ್‌ಫೇರ್ ಅಸೋಸಿಯೇಷನ್ ರವರ ಸಹಕಾರದೊಂದಿಗೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರಿಂದ "ಶ್ರೀಮತಿ ಪರಿಣಯ ಅಗ್ರ ಪೂಜೆ" ಎಂಬ ಯಕ್ಷಗಾನ ಪ್ರಸಂಗ ಆಯೋಜಿಸಿದ್ದರು.


ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ಮೊಹಮ್ಮದ್ ನವಾಜ್, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ ಕೆ.ರಾಜೇಶ್ ರೈ, ಕರ್ನಾಟಕದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಮತ್ತು ಬ್ಯಾರಿ ಅಸೋಸಿಯೇಷನ್‌ನ ಪ್ರವರ್ತಕರಾದ  ಉಮರ್ ಟೀಕೆ, ಹೈಕೋರ್ಟಿನ ಹಿರಿಯ ನ್ಯಾಯವಾದಿ ಕೆ.ಎಸ್. ವ್ಯಾಸ ರಾವ್ ಉಪಸ್ಥಿತರಿದ್ದರು.


ಗಂಡು ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸಲು ಸಹೋದರ ಸಮುದಾಯದೊಂದಿಗೆ ಬ್ಯಾರಿ ಸಮುದಾಯವು ಕೈ ಜೋಡಿಸಿದೆ, ಇಂತಹ ಕಲಾ ಕಾರ್ಯಕ್ರಮಗಳು ಅವಿಭಜಿತ ದ.ಕನ್ನಡ ಜಿಲ್ಲೆಯ ಮಣ್ಣಿನ ಮಕ್ಕಳಲ್ಲಿ ಶಾಂತಿ ಸೌಹಾರ್ದತೆ ಹೆಚ್ಚಿಸಲು ಪೂರಕವಾಗಿದೆ ಮತ್ತುಈ ಕಾರ್ಯಕ್ರಮವು ಸೌಹಾರ್ದ ಭವನದಲ್ಲಿ ಆಯೋಜಿಸಿದ್ದಕ್ಕೆ ವಂದನೆ ಸಲ್ಲಿಸಿ ಮುಂದಿನ ವರ್ಷವೂ ಅಯೋಜಿಸುವಂತೆ ಉಮರ್ ಟೀಕೆ ತಿಳಿಸಿದರು.


ಕಲಾಭಿಮಾನಿಗಳ ಮೆಚ್ಚುಗೆಯೊಂದಿಗೆ, ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದ ರೂವಾರಿಗಳಾದ ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ ಎಂ. ಸುಧಾಕರ ಪೈ ಸ್ವಾಗತಿಸಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top