ಮಂಗಳೂರು: ಅಪ್ಸರಾ ಐಸ್ ಕ್ರೀಮ್ಸ್ ತನ್ನ 53ನೇ ವಾರ್ಷಿಕೋತ್ಸವದಂದು 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮುಸ್ಕಾನ್ ಎಂಬ ವಿಶಿಷ್ಟ ಉಪಕ್ರಮವನ್ನು ಪ್ರಕಟಿಸಿದ್ದು, ವಿವಿಧ ಎನ್‍ಜಿಒಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಸರ್ಕಾರಿ ಮತ್ತು ಸರ್ಕಾರೇತರ ವಲಯದ ವಿವಿಧ ಪ್ರತಿಷ್ಠಾನಗಳಿಗೆ ಒಟ್ಟು 53 ಸಾವಿರ ಐಸ್‍ಕ್ರೀಂ ವಿತರಿಸಲು ಉದ್ದೇಶಿಸಿದೆ.
ಈ ವಿಶಿಷ್ಟ ಉಪಕ್ರಮ ಸ್ವಾತಂತ್ರ್ಯ ದಿನಾಚರಣೆಯಂದು ಮುಂಬೈ ಮತ್ತು ಪುಣೆಯಲ್ಲಿ ಚಾಲನೆ ಪಡೆಯಲಿದ್ದು, ಎಲ್ಲ ನಗರಗಳನ್ನೂ ತಲುಪಲಿದೆ. ಈ ಉಪಕ್ರಮದಡಿ ನಾಲ್ಕು ಟನ್ ಐಸ್ ಕ್ರೀಮ್ ಗಳನ್ನು ವಿತರಣೆ ಮಾಡಲಾಗುತ್ತದೆ. ಎನ್‍ಜಿಒಗಳು ಮತ್ತು ಲಯನ್ಸ್ ಕ್ಲಬ್, ಲಿಯೋ, ಲಯನ್ ಇಂಟರ್‍ನ್ಯಾಷನಲ್ ಲ್ಯಾಂಡ್, ಸ್ವದೇಸ್ ಫೌಂಡೇಶನ್‍ನಂತಹ ಪ್ರಮುಖ ಸಾಮಾಜಿಕ ಸಂಸ್ಥೆಗಳು ಸಹ ಈ ಉಪಕ್ರಮದ ಭಾಗವಾಗಲಿವೆ. ಈ ಉಪಕ್ರಮವು ಭಾರತದ 9 ರಾಜ್ಯಗಳು ಮತ್ತು ಮಂಗಳೂರು ಸೇರಿ 25 ನಗರಗಳನ್ನು ಒಳಗೊಳ್ಳುತ್ತದೆ ಎಂದು ಸ್ಥಾಪಕ ಪಾಲುದಾರ ನೆಮ್ ಚಂದ್ ಶಾ ನತ್ತು ವ್ಯವಸ್ಥಾಪಕ ಪಾಲುದಾರ ಕೆಯೂರ್ ಶಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ