ಆಳ್ವಾಸ್ ಎ.ಸಿ.ಸಿ.ಎ - ಯು.ಕೆ ವಿದ್ಯಾರ್ಥಿಗೆ ವಿಶ್ವದ 9ನೇ ಹಾಗೂ ಭಾರತದ 3ನೇ ರ‍್ಯಾಂಕ್
ಎ.ಸಿ.ಸಿ.ಎ - ಯು. ಕೆ ಮತ್ತು ಸಿ.ಎಂ.ಎ - ಯು.ಎಸ್. ಪರೀಕ್ಷಾ ಫಲಿತಾಂಶ ಪ್ರಕಟ
ಮೂಡುಬಿದಿರೆ: ಜೂನ್ 2024ರಲ್ಲಿ ನಡೆದ ಎ.ಸಿ.ಸಿ.ಎ - ಯು. ಕೆ ಪರೀಕ್ಷೆಯ ವಿವಿಧ ಪತ್ರಿಕೆಗಳಲ್ಲಿ ಆಳ್ವಾಸ್ ಕಾಲೇಜಿನ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಹಸನ್ ಸುಹೈಲ್, ಶೇಖ್ ಮೊಹಮ್ಮದ್ ಸೈಮ್, ಲಿಯೋನಾ ವಿಯೋಲಾ ಡಿಸೋಜಾ, ಬಿಂದಿಯಾ ಎನ್ ಇವರು ಎ.ಸಿ.ಸಿ.ಎ - ಎಫ್-8 ಆಡಿಟ್ ಆಂಡ್ ಅಶ್ಯೂರೆನ್ಸ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಲ್ಮಾಝ್, ರಿಯಾ ಲಿಸಾ ರೆಬೆಲ್ಲೋ, ಸಂತೋಷ್ ನಾಯಕ್, ಸುವೈದ್ ಸುಲೈಮಾನ್, ಪ್ರತೀಕ್ ವಿ ಹೆಗ್ಡೆ, ಚೈತನ್ಯಾ ಎಮ್, ಪ್ರಶಾ ಜೈನ್ ಇವರು ಎ.ಸಿ.ಸಿ.ಎ - ಎಫ್-7 ಫೈನಾನ್ಶಿಯಲ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಳ್ವಾಸ್‌ನ ದ್ವಿತೀಯ ಬಿ.ಕಾಂ. ಎ.ಸಿ.ಸಿ.ಎ.ಯ ವಿದ್ಯಾರ್ಥಿ ಹಸನ್ ಸುಹೈಲ್ ಆಡಿಟ್ ಆಂಡ್ ಅಶ್ಯೂರೆನ್ಸ್ (ಎ.ಸಿ.ಸಿ.ಎ - ಎಫ್-8) ಪತ್ರಿಕೆಯಲ್ಲಿ 77 ಅಂಕಗಳನ್ನು ಪಡೆದುಕೊಂಡಿದ್ದು, ಈ ಪತ್ರಿಕೆಯಲ್ಲಿ ವಿಶ್ವದ 9ನೇ ಹಾಗೂ ಭಾರತದ 3ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಆಳ್ವಾಸ್‌ನಲ್ಲಿ ಈ ಸಾಧನೆ ಮಾಡಿದ ಪ್ರಥಮ ವಿದ್ಯಾರ್ಥಿಯಾಗಿದ್ದಾರೆ. ಇವರು ಮಾರ್ಚ್2024ರಲ್ಲಿ ನಡೆದ ಎ.ಸಿ.ಸಿ.ಎ - ಯು. ಕೆ ಎಫ್-7 ಫೈನಾನ್ಶಿಯಲ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ ಅತ್ಯಧಿಕ ಶೇಕಡಾ 91 ಪಡೆದುಕೊಂಡಿದ್ದರು. ಇವರಿಗೆ ಆಳ್ವಾಸ್ ಕಾಲೇಜಿನಲ್ಲಿ ಎ.ಸಿ.ಸಿ.ಎ ಕಲಿಯುತ್ತಿರುವುದರಿಂದ ಒಟ್ಟು 13 ಪತ್ರಿಕೆಗಳಲ್ಲಿ 5 ಪತ್ರಿಕೆಗಳಲ್ಲಿ ವಿನಾಯಿತಿ ದೊರೆಯುತ್ತಿದೆ.
ಆಳ್ವಾಸ್‌ನ ಬಿ.ಕಾಂ. ಎ.ಸಿ.ಸಿ.ಎ.ಯ ಹಿರಿಯ ವಿದ್ಯಾರ್ಥಿ ಪ್ರಫುಲ್ಲ್ ರಾವ್ ಎ.ಸಿ.ಸಿ.ಎ. ಫೈನಲ್ ವಿಭಾಗದ ಸ್ಟೆçಟೆಜಿಕ್ ಬಿಸಿನೆಸ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ 67 ಅಂಕಗಳೊAದಿಗೆ ಉತ್ತೀರ್ಣರಾಗಿದ್ದಾರೆ.
ಮೇ 2024ರಲ್ಲಿ ನಡೆದ ಸಿ.ಎಂ.ಎ- ಯು.ಎಸ್. ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಲೋಯ್ಡ್ ಪ್ರೀತೇಶ್ ಡಿಸೋಜಾ ಸಿ.ಎಂ.ಎ- ಪಾರ್ಟ್-1 ವಿಭಾಗದಲ್ಲಿ ಶೇಕಡಾ 72 (360/500) ಅಂಕಗಳೊAದಿಗೆ ಉತ್ತೀರ್ಣರಾಗಿ ಉತ್ತಮ ಸಾಧನೆ ಮಾಡಿದ್ದಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಎ.ಸಿ.ಸಿ.ಎ - ಯು. ಕೆ ಸಂಯೋಜಕ ಅಶೋಕ್‌ಕೆ.ಜಿ. ಮತ್ತು ಸಿ.ಎಂ.ಎ- ಯು.ಎಸ್. ಸಂಯೋಜಕಿ ಶಿಲ್ಪಾ ಭಟ್ ಎನ್.ಹೆಚ್. ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ