ಕೋಲಾರ: ನಗರ- ರೈತ ಸಹಭಾಗಿತ್ವ ಯೋಜನೆಗೆ ಒಪ್ಪಂದ

Upayuktha
0


ಕೋಲಾರ: ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್, ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಗರ-ರೈತ ಸಹಭಾಗಿತ್ವ ಯೋಜನೆ ಮೂಲಕ ನಗರದ ತ್ಯಾಜ್ಯ ನಿರ್ವಹಣೆ ಸವಾಲುಗಳು ಮತ್ತು ಘನ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಯನ್ನು ಉತ್ತೇಜಿಸಲು ಚಿಕ್ಕಬಳ್ಳಾಪುರ ನಗರಸಭೆ (ಸಿಎಂಸಿ) ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಲ್‍ಮೆಂಟ್ಸ್ (ಐಐಎಚ್‍ಎಸ್) ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

 

ಸಾವಯವ ಹಸಿ ತ್ಯಾಜ್ಯವನ್ನು ರೈತರಿಗೆ ಬೆಲೆಬಾಳುವ ಗೊಬ್ಬರವನ್ನಾಗಿ ಪರಿವರ್ತಿಸುವತ್ತ ಗಮನಹರಿಸಲಾಗಿದ್ದು, ಸುಮಾರು 759 ಟನ್ ಪಾರಂಪರಿಕ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಅರೆ ಸಂಸ್ಕರಣೆ ಮಾಡಿ ಚಿಕ್ಕಬಳ್ಳಾಪುರದ 17 ಗ್ರಾಮಗಳಲ್ಲಿ 109 ರೈತರಿಗೆ ಸರಬರಾಜು ಮಾಡಲು ಉದ್ದೇಶಿಸಿದೆ ಎಂದು ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್‍ನ ಮುಖ್ಯ ವಿನ್ಯಾಸ ಮತ್ತು ಸುಸ್ಥಿರತೆ ಅಧಿಕಾರಿ ರೋಹಿತ್ ಮೋಹನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲು 1,000 ಘನ ಮೀಟರ್ ತ್ಯಾಜ್ಯದಿಂದ ಸಂಸ್ಕರಿಸಿದ ಕಾಂಪ್ರೆಸ್ಟ್ಅನ್ನು ಯಾವುದೇ ವೆಚ್ಚವಿಲ್ಲದೆ ಒದಗಿಸಲಾಗಿದೆ. ಹೆಚ್ಚುವರಿಯಾಗಿ, 81 ರೈತರ ಸಹಯೋಗದ ಮೂಲಕ 569 ಟನ್‍ಗಳಿಗಿಂತ ಹೆಚ್ಚು ಪ್ರತ್ಯೇಕವಾದ ಹಸಿ ತ್ಯಾಜ್ಯವನ್ನು ಸಂಸ್ಕರಿಸಲಾಗಿದೆ.

 

ಸುಸ್ಥಿರ ತ್ಯಾಜ್ಯ ನಿರ್ವಹಣಾ ಅಭ್ಯಾಸಗಳ ಪ್ರಯೋಜನಗಳ ಕುರಿತು ರೈತ ಸಮುದಾಯಗಳು ಮತ್ತು ಮಧ್ಯಸ್ಥಗಾರರನ್ನು ಉತ್ತೇಜಿಸಲು ಮತ್ತು ಶಿಕ್ಷಣ ನೀಡಲು, ಐಐಎಚ್‍ಎಸ್ ನಗರಸಭೆಯ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಕುರಿತು 100 ಕ್ಕೂ ಹೆಚ್ಚು ರೈತರಿಗೆ ಬಹು ತರಬೇತಿ ಶಿಬಿರಗಳನ್ನು ನಡೆಸಿತು. ಜತೆಗೆ 45 ನಗರಸಭೆ ಸಿಬ್ಬಂದಿಗೆ ತ್ಯಾಜ್ಯ ನಿರ್ವಹಣೆಯ ಪ್ರಮುಖ ಅಂಶಗಳ ಬಗ್ಗೆ ತರಬೇತಿ ನೀಡಲಾಯಿತು ಎಂದು ವಿವರಿಸಿದೆ.


ಮೂಲದಲ್ಲಿ ತ್ಯಾಜ್ಯ ವಿಂಗಡಣೆಯನ್ನು ಉತ್ತೇಜಿಸಲು ಘನ ತ್ಯಾಜ್ಯ ನಿರ್ವಹಣೆ (ಎಸ್‍ಡಬ್ಲ್ಯುಎಂ) ಯೋಜನೆಗಾಗಿ ನಗರ- ರೈತ ಸಹಭಾಗಿತ್ವದ ಭಾಗವಾಗಿ ವಾರ್ಡ್ ಮಟ್ಟದ ಸಭೆ ಮತ್ತು ಪ್ರತಿಕ್ರಿಯೆ ಸಭೆಗಳ ಸರಣಿಯನ್ನು ನಡೆಸಲಾಗಿದೆ. ಈ ಸಭೆಗಳಲ್ಲಿ ಸಿಎಂಸಿ ಅಧಿಕಾರಿಗಳು, ಐಐಎಚ್‍ಎಸ್ ಯೋಜನಾ ತಂಡ, ಅಂಗನವಾಡಿ ಕಾರ್ಯಕರ್ತೆಯರು, ಮನೆ ಮನೆಗೆ ತ್ಯಾಜ್ಯ ಸಂಗ್ರಹಣೆಯ ಮೇಲ್ವಿಚಾರಣೆಯಲ್ಲಿ ತೊಡಗಿರುವ ಸ್ವಯಂಸೇವಕರು ಮತ್ತು ಪ್ರತಿ ವಾರ್ಡ್‍ನಿಂದ ಸುಮಾರು 50 ಮಂದಿ ನಾಗರಿಕರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top