ಉಳಿಯ ಪೆಟ್ಟು ತಿಂದ ಕಲ್ಲು ಮೂರ್ತಿಯಾಗುವುದು

Upayuktha
0

ದನ್ನು ಕೇಳಿದರೆ ಜೀವನದ ಕಟು ಸತ್ಯದ ಅರಿವಾಗುವುದು. ಜೀವನದಲ್ಲಿ  ನೋವನ್ನು ಅನುಭವಿಸಿದಾ ಗಲೇ ನಮಗೆ ಸುಖದ ಮಹತ್ವವಾಗುವುದು. ಇಲ್ಲಿ ಒಂದು ಕಥೆ ನೆನಪಾಗುವುದು. ಒಬ್ಬ ಶಿಲ್ಪಿ ಕಲ್ಲುಗಳನ್ನು ಕೆತ್ತುತ್ತಿದ್ದ. ಒಂದು ಕಲ್ಲು ಉಳಿಯ ಪೆಟ್ಟನ್ನು ತಿನ್ನಲು ನಿರಾಕರಿಸಿತು. ಅದಕ್ಕೆ ಅದನ್ನು  ದೇವಸ್ಥಾನದ ಮೆಟ್ಟಿಲು ಆಗಿ ಪರಿವರ್ತಿಸಿ ಉಳಿಯ ಪೆಟ್ಟು ತಿಂದ ಕಲ್ಲನ್ನು ಮೂರ್ತಿಯನ್ನಾಗಿ ಮಾಡಿದ. ದೇವಸ್ಥಾನಕ್ಕೆ ಬಂದ ಭಕ್ತರೆಲ್ಲರೂ ಮೆಟ್ಟಿಲಿನ ಮೇಲೆ ಕಾಲಿಟ್ಟು ಬರುತ್ತಿದ್ದರು. ಇದರಿಂದ ಬೇಸತ್ತ ಕಲ್ಲು ಶಿಲ್ಪಿಗೆ ಕೇಳಿತು. ಆ ಕಲ್ಲನ್ನು ಜನರು ಪೂಜೆ ಮಾಡುತ್ತಾರೆ ಮತ್ತು ನನ್ನ ಮೇಲೆ ಕಾಲಿಟ್ಟು ಬರುತ್ತಾರೆ. ಇದಕ್ಕೆ ಕಾರಣವೇನು ಎಂದು ಕೇಳಿತು.


ಆಗ ಶಿಲ್ಪಿಯು ಉತ್ತರಿಸಿದನು. ಆ ಕಲ್ಲು ಪೆಟ್ಟು ತಿಂದು ಮೂರ್ತಿಯಾಗಿ ಶೋಭಿಸುತ್ತಿದೆ. ಆದರೆ ನೀನು ಪೆಟ್ಟು ತಿನ್ನಲು ನಿರಾಕರಿಸಿದ್ದಕ್ಕೆ ನೀನು ಮೆಟ್ಟಿಲಾದೆ.


ಇದರಿಂದ ಒಂದು ಸಂಗತಿ ಸ್ಪಷ್ಟ ವಾಗುತ್ತದೆ. ನಾವು ಜೀವನದಲ್ಲಿ ನೋವು, ನಿರಾಶೆ ಅನುಭವಿಸಿದಾಗ ನಮಗೆ ಉತ್ತಮ ಜೀವನದ ಮಹತ್ವವಾಗುತ್ತದೆ.

ಸಾಗರದಲ್ಲಿ ಆಳಕ್ಕೆ ಇಳಿದಾಗಲೇ ನಮಗೆ ರತ್ನಗಳು ಸಿಗಲು ಸಾಧ್ಯ. ಇಂಗ್ಲಿಷಿನಲ್ಲಿ ಒಂದು ಗಾದೆಯಿದೆ. "You can cross the ocean without wetting the legs but you cannot cross the life without wetting the eyes" ಹಾಗೆಯೇ ನಮ್ಮ ಜೀವನದಲ್ಲಿ ಬಂದ ನೋವನ್ನು ಅನುಭವಿಸಿ ಯಶಸ್ಸನ್ನು ಗಳಿಸಿ ತೋರಿಸೋಣ.


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top