ಅಬುಧಾಬಿ: ಭಾರತದ ರಾಯಭಾರಿ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

Upayuktha
0


ಅಬುಧಾಬಿ: ಯು.ಎ.ಇ. ರಾಜಧಾನಿ ಅಬುಧಾಬಿಯಲ್ಲಿರುವ ಭಾರತದ ರಾಯಭಾರಿ ಕಛೇರಿಯ ಪ್ರಾಂಗಣದಲ್ಲಿ ಭಾರತದ 78ನೇಯ ಸ್ವಾತಂತ್ರ್ಯೇೂತ್ಸವ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣಗೈದ ಯು.ಎ.ಇ.ಯಲ್ಲಿನ ಭಾರತದ ರಾಯಭಾರಿಗಳಾದ ಗೌರವಾನ್ವಿತ ಸಂಜಯ್ ಸುಧೀರ್ ಮಾತನಾಡಿ, "ಭಾರತ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುವ ಪಥದಲ್ಲಿದ್ದು ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆಯನ್ನು ಪರಿಚಯಿಸಿ ಶ್ಲಾಘಿಸಿದರು.


ಯು.ಎ.ಇ ಮತ್ತು ಭಾರತದ ನಡುವಿನ ಉತ್ತಮ ಬಾಂಧವ್ಯ ಎರಡು ರಾಷ್ಟ್ರಗಳ ಅಭಿವೃದ್ಧಿಗೆ ಪೂರಕವಾಗಿ ನಿಂತಿದೆ. ಅಬುಧಾಬಿಯಲ್ಲಿನ ಮಂದಿರ ಸ್ಥಾಪನೆ ಎರಡು ರಾಷ್ಟ್ರಗಳ ಭಾವನಾತ್ಮಕ ಬೆಸುಗೆಯಾಗಿ ನಿಂತಿದೆ ಎಂದು ವಣಿ೯ಸಿ ಶುಭಕೇೂರಿದರು. ಇದೇ ಸಂದರ್ಭದಲ್ಲಿ ವಿಶೇಷ ಸಾಧಕರನ್ನು ಮತ್ತು ಯು.ಎ.ಇ.ಯಲ್ಲಿ ನೆಲಸಿರುವ ವಿವಿಧ ಸಮೂಹದ ಮುಖ್ಯಸ್ಥರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.


ಯು.ಎ.ಇ. ಕನಾ೯ಟಕ ಸಂಘದ ಅಧ್ಯಕ್ಷ ಸವೋತ್ತಮ ಶೆಟ್ಟಿ, ಅಬುಧಾಬಿ ಪ್ರವಾಸದಲ್ಲಿರುವ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರು ಹಾಗೂ ಅಬುದಾಭಿಯಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಗಣ್ಯರು ಭಾರತದ ರಾಯಭಾರಿಗಳಾದ ಸಂಜಯ್ ಸುಧೀರ್ ರವರಿಗೆ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶುಭಾಶಯ ಕೇೂರಿದರು. ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top