ಬೆಂಗಳೂರು: 'ಅಹಿಂಸೆ ಹಾಗೂ ಸತ್ಯ ಎಂಬ ಅದೃಶ್ಯ ಆಯುಧಗಳಿಂದ ಅತ್ಯಂತ ಪ್ರಬಲ ಬ್ರಿಟಿಷ್ ಸಾಮ್ರಾಜ್ಯವನ್ನು ಸೋಲಿಸಿದ ಕೀರ್ತಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲುತ್ತದೆ. ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ ಸ್ಪಷ್ಟಸ್ವರೂಪ ಪಡೆದದ್ದೇ ಭಾರತದ ನೆಲದ ನೈತಿಕತೆ ಹಾಗೂ ಜೀವನ ಮೌಲ್ಯಗಳು ನೀಡಿದ ಸ್ಫೂರ್ತಿಯಿಂದ ಎಂಬುದು ಸತ್ಯ. ಅದರಿಂದ ಇಂದು ನಾವೂ ಕೂಡ ಈ ನೈತಿಕತೆಯನ್ನು ಹಾಗೂ ಮೌಲ್ಯಗಳನ್ನು ಅಂತರ್ಗತವಾಗಿಸಿಕೊಂಡು ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಬೇಕು' ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಹಕುಲಪತಿ ಹಾಗೂ ಪ್ರಸಿದ್ಧ ಇತಿಹಾಸ ತಜ್ಞ ಪ್ರೊ. ಎಸ್. ಚಂದ್ರಶೇಖರ್ ನುಡಿದರು.
ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ 78ನೇ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. 'ದೇಶದ ಸರ್ವರೂ ಎಲ್ಲ ಭಿನ್ನಮತಗಳನ್ನು ಮೀರಿ ಒಂದಾಗಿ 2047ರ ಹೊತ್ತಿಗೆ ಸುಭದ್ರ ಭಾರತವನ್ನು ಕಟ್ಟುವಂತಾಗಬೇಕು', ಎಂದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ಅಕಾಡೆಮಿಕ್ ನಿರ್ದೇಶಕ ಡಾ. ಸಂದೀಪ ಶಾಸ್ತ್ರಿ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್ ಹಾಗೂ ಸಂಸ್ಥೆಯ ಎನ್.ಸಿ.ಸಿ. ಮುಖ್ಯಸ್ಥ ಡಾ. ರಾಜೇಶ್ ನಂದಳಿಕೆ ಉಪಸ್ಥಿತರಿದ್ದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲದ ಪ್ರಾಂಶುಪಾಲ ಡಾ. ಎಚ್. ಸಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ 2024ರ ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ಎನ್.ಸಿ.ಸಿ. ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ