ಮಂಗಳೂರು: ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಂದು ಆಚರಿಸಲಾದ 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ, ಗಂಗಾಧರ ಮಟ್ಟಿ, ಎನ್.ಎ ಅಬ್ದುಲ್ಲಾ, ಮಾಜಿ ಸೈನಿಕರಾದ ಕೆ.ಪಿ ಜಗದೀಶ್, ಬಿ.ಕೆ ಮಾಧವ, ರಾಮದಾಸ್ ಶೇಟ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಸುರೇಶ್ ಬೆಳಗಜೆ ಅವರು ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಬೆಳಗಜೆ ವೆಂಕಟಕೃಷ್ಣಯ್ಯನವರ ಪುತ್ರರು. ಪ್ರಜಾವಾಣಿ, ಉದಯವಾಣಿ, ಸುದ್ದಿ ಬಿಡುಗಡೆ ಸೇರಿದಂತೆ ಮಾಧ್ಯಮ ಕ್ಷೇತ್ರದಲ್ಲಿ 34 ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದವರು. 2023ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಪ್ರಜಾವಾಣಿಯ ಗುಲ್ಬರ್ಗ ಬ್ಯೂರೋದ 6 ಆವೃತ್ತಿಗಳ ಮುಖ್ಯಸ್ಥರಾಗಿ 4 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದಾರೆ.
ಪ್ರಜಾವಾಣಿಯಲ್ಲಿ ಪ್ರಕಟಿತ ಅತ್ಯುತ್ತಮ ಗ್ರಾಮೀಣ ವರದಿಗಾಗಿ 2001ರಲ್ಲಿ ಅಂತರ್ ಜಿಲ್ಲಾ ಪ.ಗೋ ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, 1995-96ರಲ್ಲಿ ಮಂಗಳೂರು ಕೋಸ್ಟಲ್ ಸಿಟಿ ಜೂನಿಯರ್ ಚೇಂಬರ್‌ನಿಂದ ಬೆಸ್ಟ್ ಜರ್ನಲಿಸ್ಟ್ ಅವಾರ್ಡ್ ಪಡೆದಿರುವ ಇವರು 2023ರಲ್ಇ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಪುರಸ್ಕೃತರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ