ಉಜಿರೆ:ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

Upayuktha
0


ಉಜಿರೆ, ಜು.11:
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಥಮ ವರ್ಷದ ಪತ್ರಿಕೋದ್ಯಮ (ಸ್ನಾತಕ ಪದವಿ) ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿಭಾಗದ ಪರಿಚಯ ಕಾರ್ಯಕ್ರಮ ಜು. 10ರಂದು ಜರಗಿತು.


 ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಭಾಗದ ಸ್ಥೂಲ ಪರಿಚಯ ನೀಡಿದ ಅವರು, ಲಭ್ಯ ಅವಕಾಶಗಳನ್ನು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.


“ನಮ್ಮ ಕಾಲೇಜಿನಲ್ಲಾಗಲೀ, ವಿಭಾಗದಲ್ಲಾಗಲೀ ರ್ಯಾಗಿಂಗ್’ಗೆ ಅವಕಾಶವಿಲ್ಲ. ಬದಲಾಗಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ವಾಗತಿಸುವ ಪರಂಪರೆಯಿದೆ. ಆ ಪ್ರಕಾರ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ಅವರು ತಿಳಿಸಿದರು.


ವಿಭಾಗದ ಪ್ರಮುಖ ಚಟುವಟಿಕೆಗಳಾದ, ಮಾತುಗಾರಿಕೆಗೆ ಸಹಕಾರಿಯಾಗುವ ದೈನಂದಿನ ‘ಫಸ್ಟ್ ಸ್ಪೀಚ್’ ಕಾರ್ಯಕ್ರಮ, ‘ನಮ್ಮೂರ ವಾರ್ತೆ’ ಸಾಪ್ತಾಹಿಕ ಟಿ.ವಿ. ವಾರ್ತಾ ಪ್ರಸಾರ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವ ‘ವೀಕ್ಲಿ ರೌಂಡಪ್’ ಸಾಪ್ತಾಹಿಕ ಕಾರ್ಯಕ್ರಮ, ಬರವಣಿಗೆಗೆ ಪ್ರೋತ್ಸಾಹ ನೀಡುವ ‘ಚಿಗುರು’ ಭಿತ್ತಿಪತ್ರಿಕೆ ಹಾಗೂ ಸಮುದಾಯ ಬಾನುಲಿ ಕೇಂದ್ರ ‘ರೇಡಿಯೋ ನಿನಾದ 90.4 ಎಫ್.ಎಂ.’ ಬಗ್ಗೆ ವಿದ್ಯಾರ್ಥಿನಿಯರಾದ ಹರ್ಷಿತಾ, ಸುದೀಕ್ಷಾ, ಸಿಂಚನಾ, ಮಾನ್ಯ, ತನುಶ್ರೀ ಮಾಹಿತಿ ನೀಡಿದರು.


ಹಿರಿಯ- ಕಿರಿಯ ವಿದ್ಯಾರ್ಥಿಗಳನ್ನು ವಿಶಿಷ್ಟ ರೀತಿಯಲ್ಲಿ ಪರಸ್ಪರ ಪರಿಚಯಿಸಿಕೊಳ್ಳಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳಾದ ಮದನ್, ಕನ್ನಿಕಾ, ರಂಗನಾಥ್, ಪ್ರಾಧ್ಯಾಪಕರಾದ ಸುನಿಲ್ ಹೆಗ್ಡೆ, ಸಂಹಿತಾ ಎಸ್. ಮೈಸೋರೆ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ವಂಶಿ ಸ್ವಾಗತಿಸಿ, ಶ್ರೇಯಾ ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top