ವಿವೇಕ ಸಂಜೀವಿನಿ ಹಸಿರು ಆವರಣ ಅಭಿಯಾನ ಉದ್ಘಾಟನೆ

Upayuktha
0

 ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್



ಪುತ್ತೂರು:
ಶುದ್ಧವಾದ ಗಾಳಿ,ಒಳ್ಳೆಯ ವಾತಾವರಣ ನಮಗೆ ದೊರಕಬೇಕೆಂದರೆ ಅಲ್ಲಿ ಸಸ್ಯಗಳ ಸಂಖ್ಯೆ ಹೆಚ್ಚಾಗಿರಬೇಕು.ಕಾಲೇಜು ಆವರಣ ಹಸಿರು ಸಸ್ಯಗಳಿಂದ ಕೂಡಿರಬೇಕು ಹಾಗೂ ಜ್ಞಾನದ ಜೊತೆಗೆ ಸಸ್ಯ ಸಂಪತ್ತನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು.ಹಸಿರಾದ ಪರಿಸರ ಕಣ್ಣಿಗೆ ಹೇಗೆ ಹಿತವೋ ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು, ಇದರಿಂದ ವಾಯುಮಾಲಿನ್ಯವನ್ನು ತಡೆಯಬಹುದು ಎಂದು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ದೇವಿಪ್ರಸಾದ್ ಕೆ.ಎನ್ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ವಿವೇಕ ಸಂಜೀವಿನಿ ಹಸಿರು ಆವರಣ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ. ನಾರಾಯಣ್ ಮಾತನಾಡಿ, ಗಿಡಗಳನ್ನು ನೆಡುವುದರ ಮೂಲಕ ಪರಿಸರವನ್ನು ಸಂರಕ್ಷಿಸಬೇಕೇ ಹೊರತು ಅದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಪರಿಸರವನ್ನು ಹಾಳುಮಾಡಬಾರದು. ಮಾನವ ಜೀವ ಸಂಕುಲಗಳನ್ನು ನಾಶ ಮಾಡುವುದರ ಜೊತೆಗೆ ಭೂಮಿಯ ವಿಕೋಪಕ್ಕೂ ಬಲಿಯಾಗು ತ್ತಿದ್ದಾನೆ ಆದ್ದರಿಂದ ಗಿಡಗಳನ್ನು ಬೆಳೆಸಿ ನಾಡನ್ನು ಉಳಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.


ಕಾರ್ಯಕ್ರಮವನ್ನು ಗಿಡನೆಡುವುದರ ಮೂಲಕ ಉದ್ಘಾಟಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ ಎಂ.ಕೃಷ್ಣ ಭಟ್  ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮ ವನ್ನು ವಿವೇಕಾನಂದ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ್ ಸ್ವಾಗತಿಸಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎನ್ಎಸ್ಎಸ್ ಘಟಕದ ಸಂಯೋಜಕಿ ಪ್ರೊ.ನಿಶಾ ಜಿ.ಆರ್ ವಂದಿಸಿ, ಇಂಜಿನಿಯರಿಂಗ್ ಕಾಲೇಜಿನ ಪ್ರಯೋಗಾಲಯ ಬೋಧಕ ಹರಿಪ್ರಸಾದ್ . ಡಿ ನಿರ್ವಹಿಸಿದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top