ಮಂಗಳೂರು: ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ 2024-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹೋಟೆಲ್ ದೀಪಾ ಕಂಪರ್ಟ್ಸ್ನಲ್ಲಿ ಜರಗಿತು.
ಅಧ್ಯಕ್ಷರಾಗಿ ಟ್ಯಾಲಿ ಕಂಪ್ಯೂಟರ್ ಮಾಲಕ ಜಗದೀಶ್ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಶ್ರೀ ಭಾರತಿ ಸಿಸ್ಟಮ್ಸನ ಮಾಲಕ ಶಂಕರನಾರಾಯಣ ಕಾರಂತ್, ಕಾರ್ಯದರ್ಶಿಯಾಗಿ ಡಿಯೊ ಟೆಕ್ ಗ್ಲೋಬಲ್‌ನ ಪಾಲುದಾರ ರವಿ ಭಟ್, ಖಜಾಂಚಿಯಾಗಿ ಚತುರ್ ಟೆಕ್ನಾಲಜಿಸ್‌ನ ಮಾಲಕ ಜಯಪ್ರಕಾಶ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶ್ರೀನಿಧಿ ಸಿಸ್ಟಮ್ಸನ ಮಾಲಕರಾದ ರಾಜೇಶ್ ಅಧಿಕಾರ ಸ್ವೀಕರಿಸಿದರು.
ಕಾರ‍್ಯಕಾರಿ ಸಮಿತಿಯ ಸದಸ್ಯರಾಗಿ ಆರ್ಯ ಎಂಟರ್ಪ್ರೈಸಸ್ ನ ನಿರ್ದೇಶಕ ಮುರಳಿ ಎಚ್., ಸಾಫ್ಟ್ ಲಿಂಕ್ ಮಾಲಕ ಗಣೇಶ್, ಐ ಕೇರ್ ಕಂಪ್ಯೂಟರ್ ಮಾಲಕ ಲೋಕೇಶ್,ಇಲೆಕ್ಟ್ರಾನಿಕ್ ಸಿಸ್ಟಂ ನ ಪಾಲುದಾರ ಭರತ್ ಶೆಟ್ಟಿ, ಎ.ಎನ್. ಎಂಟರ್ಪ್ರೈಸಸ್ ನ ಪಾಲುದಾರ ನಿರಂಜನ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಭರತ್ ಶೆಟ್ಟಿ ತಮ್ಮ ನಿರ್ಗಮನ ಭಾಷಣದಲ್ಲಿ ಸಂಸ್ಥೆಯ ಕಳೆದ ಅವಧಿಯ ಕಾರ್ಯಕ್ರಮಗಳ ವಿವರಗ ನೀಡಿದರು. ಅಧಿಕಾರ ವಹಿಸಿಕೊಂಡ ಅಧ್ಯಕ್ಷರಾದ ಜಗದೀಶ್ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.
ಕಾರ‍್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಭರತ್ ಶೆಟ್ಟಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು ಮತ್ತು ಭಾರತೀಯ ಜನತಾ ಪಕ್ಷದ ಶಿಕ್ಷಣ ಪ್ರಕೋಷ್ಟದ ರಾಜ್ಯ ಸದಸ್ಯರಾಗಿ ಆಯ್ಕೆಯಾದ ಮುರಳಿ ಹೆಚ್ ಅವರನ್ನು ಗೌರವಿಸಲಾಯಿತು.
ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ (ಎಂಐಟಿಡಿಎ) ಪೂರ್ವಾಧ್ಯಕ್ಷರಾದ ಗೋಪಿನಾಥ್, ಕೇತನ್ ಚಂದ್ರಾನ, ಸಾಯಿ ರಾವ್ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ಶಂಕರ ನಾರಾಯಣ ಪ್ರಾರ್ಥನೆ ನೆರವೇರಿಸಿದರು, ಜಗದೀಶ್ ಸ್ವಾಗತಿಸಿ, ರವಿ ಭಟ್ ವಂದನಾರ್ಪಣೆ ಸಲ್ಲಿಸಿದರು. ಮುರಳಿ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ