ಮೈಂಡ್ ಮ್ಯಾಜಿಕ್ – ಜ್ಞಾಪಕ ಶಕ್ತಿ ವರ್ಧನಾ ವಿಶಿಷ್ಟ ಕಾರ್ಯಾಗಾರ

Upayuktha
0


ಸುರತ್ಕಲ್: ಆಂತರಂಗಿಕ ಶಕ್ತಿಯ ವರ್ಧನೆಗೆ ಏಕಾಗ್ರತೆ ಅಗತ್ಯವಿದ್ದು ದೃಢ ಪ್ರಯತ್ನದಿಂದ ಯಶಸ್ಸನ್ನು ಪಡೆಯಲು ಸಾಧ್ಯ. ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ, ನೆನಪುಗಳು, ಗ್ರಹಣ ಶಕ್ತಿಗಳ ಸಮೂಹವಾಗಿರುವ ಮನಸ್ಸಿನ ಶಕ್ತಿಯ ವರ್ಧನೆಯನ್ನು ಮಾಡಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ನುಡಿದರು.


ಅವರು ಶ್ರೀ ಮಹಾಲಿಂಗೇಶ್ವರ ಇಂಗ್ಲೀಷ್ ಮೀಡಿಯಂ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರೋಟರಿ ಕ್ಲಬ್ ಸುರತ್ಕಲ್  ಆಶ್ರಯದಲ್ಲಿ ನಡೆದ ಮೈಂಡ್ ಮ್ಯಾಜಿಕ್ – ಜ್ಞಾಪಕ ಶಕ್ತಿ ವರ್ಧನಾ ವಿಶಿಷ್ಟ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಶ್ರೀ ಮಹಾಲಿಂಗೇಶ್ವರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ವೈ. ರಮಾನಂದ ರಾವ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಭೌದ್ಧಿಕ ಬೆಳವಣಿಗೆಗಳಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದರು.


ಸುರತ್ಕಲ್ ರೋಟರಿ ಕ್ಲಬ್‌ನ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ ಮುಖ್ಯ ಅತಿಥಿಗಳಾಗಿ ಮಾತನಾಡಿ ಏಕಾಗ್ರತೆಯ ಕಲೆಯನ್ನು ರೂಢಿಸಿಕೊಂಡಾಗ ಪ್ರತಿಭಾವಂತರಾಗಲು ಸಾಧ್ಯ ಎಂದರು. ಶಾಲಾ ಸಂಚಾಲಕ ಹಾಗೂ ಕಾರ್ಯಾಗಾರದ ಪ್ರಾಯೋಜಕ ಸತೀಶ್  ರಾವ್ ಇಡ್ಯಾ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಮಾಲಿನಿ ಬಂಗೇರ ಸ್ವಾಗತಿಸಿದರು. ಕ್ಯಾಬಿನೇಟ್ ಲೀಡರ್  ಸ್ಪೂರ್ತಿ ಬಂಗೇರ ವಂದಿಸಿದರು.  ಮಹಾಲಿಂಗೇಶ್ವರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಲಕ್ಷ್ಮಣ ಸಾಲ್ಯಾನ್, ಸಮಿತಿ ಸದಸ್ಯರಾದ ಮಧುಸೂಧನ್ ರಾವ್, ಪುಂಡಲೀಕ ಹೊಸಬೆಟ್ಟು, ಶ್ರೀಕಾಂತ್, ಡಾ. ಕೆ. ರಾಜಮೋಹನ ರಾವ್  ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕುದ್ರೋಳಿ ಗಣೇಶ್ ಅವರನ್ನು ಸನ್ಮಾನಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top