ಕುಂದಾಪುರ: ಮುಳ್ಳಿಕಟ್ಟೆ ರಾ.ಹೆದ್ದಾರಿಯಲ್ಲಿ ಸಕ್ಕರೆ ತುಂಬಿದ ಲಾರಿ ಪಲ್ಟಿ

Chandrashekhara Kulamarva
0


ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಳ್ಳಿಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕ್ಕರೆ ತುಂಬಿದ ಭಾರೀ ಗಾತ್ರದ ಲಾರಿಯೊಂದು ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಪಲ್ಟಿಯಾಗಿದೆ.


ಚಾಲಕ ಅಪಾಯದಿಂದ ಪಾರಾಗಿದ್ದು, ಹೆದ್ದಾರಿ ಸಂಚಾರದಲ್ಲಿ ಸ್ವಲ್ಪ ಮಟ್ಟಿಗೆ ತಡೆಯುಂಟಾಯಿತು. ಗಂಗೊಳ್ಳಿ ಠಾಣೆ ಪೊಲೀಸರು, ಹೆದ್ದಾರಿ ಗಸ್ತು ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಲಾರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.


ಮುಳ್ಳಿಕಟ್ಟೆ ಹೆದ್ದಾರಿ ಜಂಕ್ಷನ್ ಸದಾ ಸಮಸ್ಯೆಯ ತಾಣವಾಗಿದೆ.


ಪಲ್ಟಿಯಾದ ಲಾರಿಯು ಸೋಲಾಪುರದಿಂದ ಕೇರಳಕ್ಕೆ ಸಕ್ಕರೆ ತುಂಬಿಕೊಂಡು ಹೋಗುತ್ತಿತ್ತು. ಹಠಾತ್ತನೆ ಎದುರು ಬಂದ ಇನ್ನೊಂದು ಭಾರೀ ಗಾತ್ರದ ಲಾರಿ ತಪ್ಪಿಸುವ ಯತ್ನದಲ್ಲಿ, ಹತೋಟಿ ತಪ್ಪಿ ಎದುರಿನ ಲಾರಿಗೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.


إرسال تعليق

0 تعليقات
إرسال تعليق (0)
To Top