ಯಶಸ್ವಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿರ್ಣಯಗಳು

Upayuktha
0

ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಪಾಕಿಸ್ತಾನದ ‘ಐಎಸ್‌ಐ’ ಜೊತೆ ಸಂಪರ್ಕ ಹೊಂದಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಹಣಕಾಸು ಪೂರೈಸುವ ‘ರಶೀದ್ ಇಂಜಿನಿಯರ್’ನಂತಹ ದೇಶವಿರೋಧಿಗಳು ಕಾರಾಗೃಹದಿಂದ ಚುನಾವಣೆಯಲ್ಲಿ ಭಾಗವಹಿಸಿ ಚುನಾಯಿತಗೊಂಡಿದ್ದಾರೆ. ‘ಎಮ್.ಐ.ಎಮ್.’ ನ ಭಾಗ್ಯನಗರದ ಸಂಸದ ಅಸದುದ್ದೀನ ಓವೈಸಿ ಅವರು ಲೋಕಸಭೆಯಲ್ಲಿ ‘ಲೋಕಸಭಾ ಸದಸ್ಯತ್ವ’ದ ಪ್ರಮಾಣ ವಚನ ಸ್ವೀಕರಿಸುವಾಗ ‘ಜಯ ಭೀಮ, ಜಯ ಮೀಮ’, ‘ಅಲ್ಲಾಹು ಅಕ್ಬರ್’ ಈ ಘೋಷಣೆಗಳೊಂದಿಗೆ ‘ಜಯ ಫಿಲೀಸ್ತೀನ (ಪ್ಯಾಲೆಸ್ಟೈನ್) ಎಂದೂ ಘೋಷಣೆ ಕೂಗಿದರು. 18 ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಮಾತನಾಡಿದ ವಿಪಕ್ಷ ನಾಯಕ ರಾಹುಲ ಗಾಂಧಿ ಇವರು ಹಿಂದೂಗಳನ್ನು ಹಿಂಸಾವಾದಿಗಳು ಎಂದು ಕರೆದರು. ಈ ಎಲ್ಲಾ ಹಿಂದೂವಿರೋಧಿ ಮತ್ತು ದೇಶವಿರೋಧಿ ಹೇಳಿಕೆಗಳು ಹಿಂದೂಗಳ ಭವಿಷ್ಯದ ಅಸ್ತಿತ್ವದ ಕುರಿತು ಪ್ರಶ್ನೆ ಮೂಡಿಸುವಂತಹದ್ದಾಗಿದೆ. ಇದರಿಂದಲೇ, ಹಿಂದೂಗಳ ರಕ್ಷಣೆಗಾಗಿ, ಹಾಗೆಯೇ ದೇಶದ ಸಮಗ್ರತೆಗಾಗಿ, ಹಿಂದೂಗಳನ್ನು ಸಂಘಟಿಸಲು ದೃಢಸಂಕಲ್ಪವನ್ನು ಈ ಅಧಿವೇಶನದಲ್ಲಿ ಮಾಡಲಾಯಿತು.


ಇಂದು ಕಾಶ್ಮೀರ, ಬಂಗಾಳ ಮೊದಲಾದ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಗಳು ದೇಶಾದ್ಯಂತ ಪ್ರಾರಂಭವಾಗಿವೆ. ಆದ್ದರಿಂದ ಸರಕಾರ ಹಿಂದೂಗಳ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಮಾಡುವ ‘ಒತ್ತಡ ಗುಂಪು’ ಕಾರ್ಯಗತಗೊಳಿಸುವ ಆವಶ್ಯಕತೆ ಯಿದೆ. ಈ ಹಿನ್ನೆಲೆಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ದೇಶ-ವಿದೇಶಗಳಿಂದ ಆಗಮಿಸುತ್ತಿರುವ ಹಾಗೆಯೇ ‘ಹಿಂದೂ ರಾಷ್ಟ್ರ’ ಸಂಕಲ್ಪದೊಂದಿಗೆ ಜೋಡಿಸಲ್ಪಟ್ಟಿ ರುವ ಎಲ್ಲ ಹಿಂದೂ ಸಂಘಟನೆಗಳು ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ ಮೂಲಕ ವರ್ಷವಿಡೀ ಕೆಲಸ ಮಾಡುವ ನಿರ್ಣಯವನ್ನು ಈ ಅಧಿವೇಶನದಲ್ಲಿ ಕೈಗೊಳ್ಳಲಾಯಿತು. ಈ ಮೂಲಕ ಹಿಂದೂ ‘ಈಕೋ-ಸಿಸ್ಟಮ್’ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು. ಮುಂಬರುವ ಭೀಕರ ಕಾಲವನ್ನು ನೋಡಿದರೆ ಹಿಂದೂಗಳು ಸ್ವಸಂರಕ್ಷಣೆಗಾಗಿ ಸಿದ್ಧರಾಗುವ ಆವಶ್ಯಕತೆಯ ಬಗ್ಗೆಯೂ ಗಣ್ಯರು ಪ್ರತಿಪಾದಿಸಿದ್ದಾರೆ.


ಅಧಿವೇಶನದ ಠರಾವುಗಳು: ಈ ಅಧಿವೇಶನದಲ್ಲಿ ಭಾರತ ಮತ್ತು ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು; ಸಂವಿಧಾನದ ಪ್ರಸ್ತಾವನೆಯಲ್ಲಿ ತುರುಕಿಸಲಾಗಿರುವ ‘ಸೆಕ್ಯುಲರ್’ ಮತ್ತು ‘ಸೋಶಿಯಲಿಸ್ಟ್’ ಎಂಬ ಪದಗಳನ್ನು ತೆಗೆದು ಹಾಕುವುದು, ಕಾಶಿ-ಮಥುರೆಯಂತಹ ಹಿಂದೂ ದೇವಸ್ಥಾನಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ ಹಿಂದೂಗಳಿಗೆ ನೀಡುವುದು; ಮತಾಂತರ ಮತ್ತು ಗೋಹತ್ಯೆಯ ವಿರುದ್ಧ ಕಠಿಣ ಕಾನೂನುಗಳನ್ನು ರಚಿಸುವುದು;

ಹಲಾಲ್ ಸರ್ಟಿಫಿಕೇಶನ್ ನಿಷೇಧಿಸುವುದು; ಹಿಂದೂ ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಗೊಳಿಸುವುದು; ‘ಪ್ಲೇಸಸ್ ಆಫ್ ವರ್ಶಿಪ್’ ಮತ್ತು ‘ವಕ್ಫ್’ ಕಾನೂನು ರದ್ದುಗೊಳಿಸುವುದು; ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸುವುದು; ಕಾಶ್ಮೀರಿ ಹಿಂದೂಗಳ ಪುನರ್ವಸತಿ; ಶ್ರೀರಾಮ ಸೇನೆಯ ಶ್ರೀ. ಪ್ರಮೋದ ಮುತಾಲಿಕ ಮೇಲಿನ ಗೋವಾ ನಿರ್ಬಂಧ ತೆರವುಗೊಳಿಸುವುದು; ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕುವುದು; ಓಟಿಟಿ ಪ್ಲಾಟ್‌ಫಾರ್ಮ್ ಕಾನೂನಿನ ವ್ಯಾಪ್ತಿಯಲ್ಲಿ ತರುವುದು;

ಆನ್‌ಲೈನ್ ರಮ್ಮಿಯಂತಹ ಜೂಜಾಟಗಳನ್ನು ನಿಷೇಧಿಸುವುದು ಮುಂತಾದ ವಿಷಯಗಳ ಮೇಲಿನ ಠರಾವನ್ನು ‘ಹರ ಹರ ಮಹಾದೇವ’ ಈ ಜಯಘೋಷದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ಆಂದೋಲನಕ್ಕೆ ವ್ಯಾಪಕ ರೂಪ ನೀಡಲು ಕೃತಿಯ ಸ್ತರದಲ್ಲಿ ರೂಪುರೇಷೆಗಳನ್ನು ನಿರ್ಧರಿಸಲಾಯಿತು. ಗೋವಾ ಸರಕಾರವು ಧಾರ್ಮಿಕ ಸ್ಥಳಗಳು ಮತ್ತು ಶಾಲೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಹೊಸ ಮದ್ಯದಂಗಡಿಗಳಿಗೆ ಅವಕಾಶ ನೀಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ನಿರ್ಣಯವನ್ನು ಅಧಿವೇಶನದಲ್ಲಿ ವಿರೋಧಿಸಲಾಯಿತು. ಹಾಗೆಯೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಈ ನಿರ್ಣಯವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಲಾಯಿತು. ಆ ಬಳಿಕ ರಾಜ್ಯ ಸರಕಾರವು ತಕ್ಷಣವೇ ಈ ನಿರ್ಣಯವನ್ನು ಹಿಂಪಡೆಯಿತು.

ಲೋಕಸಭೆಯ ಚುನಾವಣೆಯಲ್ಲಿ ಪ್ರಸ್ತುತ ಸರಕಾರಕ್ಕೆ ಅಪೇಕ್ಷಿತವಿರುವಷ್ಟು ಸ್ಥಾನ ದೊರಕದ ಕಾರಣ, ಹಿಂದುತ್ವನಿಷ್ಠರಲ್ಲಿ ಒಂದು ರೀತಿಯ ನಿರಾಶೆಯಾಗಿತ್ತು; ಆದರೆ ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಿಂದ ಹಿಂದುತ್ವನಿಷ್ಠರಲ್ಲಿ ಒಂದು ಹೊಸ ಶಕ್ತಿಯನ್ನು ತುಂಬುವ ಕಾರ್ಯವಾಗಿದೆ ಯೆಂದು ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷರಾದ ರಣಜೀತ ಸಾವರಕರ ಇವರು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top