ಬಳ್ಳಾರಿ: ಪ್ರತಿ ಮಗುವಿನ ಕಲಿಕಾ ಮಟ್ಟವನ್ನು ಮೌಖಿಕ ಹಾಗೂ ಲಿಖಿತವಾಗಿ ಮುಖಾಮುಖಿ ಪರಿಶೀಲಿಸಿ, ಪ್ರಗತಿಕಂಡರೆ ಪ್ರಶಂಸಿಸಿ, ನ್ಯೂನತೆ ಕಂಡುಬಂದಲ್ಲಿ ಸಲಹೆ ಸೂಚನೆ ಹಾಗೂ ಮಾರ್ಗ ದರ್ಶನ ಮಾಡುತ್ತಿರುವುದು ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಅಭಿಪ್ರಾಯ ಪಟ್ಟರು.
ಪ್ರತಿ ಮಗುವಿಗು ಓದಲು, ಬರೆಯಲು ಹಾಗೂ ಸರಳ ಲೆಕ್ಕಗಳನ್ನು ಮಾಡವಂತೆ ಸಮರ್ಥರನ್ನಾಗಿ ತಯಾರಿ ಮಾಡಬೇಕಾದ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ. ಪೋಷಕರ ನಿರೀಕ್ಷೆಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕೆಂದು ಕಿವಿಮಾತು ಹೇಳಿದರು. ಅಂದ್ರಾಳ್ ಸಿ.ಆರ್. ಪಿ.ಕೇಶವರೆಡ್ಡಿ, ಕಮ್ಮರಚೇಡು ಶಾಲೆಯ ಟಿ.ಜಿ.ಟಿ ಶಿಕ್ಷಕರಾದ ಶಿವಮೂರ್ತಿ, ಎತ್ತಿನಬೂದಿಹಾಳ್ ಶಾಲೆಯ ಶಿಕ್ಷಕರಾದ ರಾಮಕೃಷ್ಣ, ಕುಬೇರ ಮೌಲ್ಯಮಾಪನ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ