ಹಾಸ್ಟೆಲ್ಎಂದಾಗ ಒಪ್ಪಿಕೊಳ್ಳುವವರಿಗಿಂತ ನಿರಾಕರಿಸುವವರೆ ಹೆಚ್ಚು ಮಂದಿ. ಹಾಸ್ಟೆಲ್ ಒಂದು ಜೈಲಿನಂತೆ ಎಂಬ ಮನೋಭಾವನೆ ಎಲ್ಲರ ಮನಸ್ಸಿನಲ್ಲಿ ಕೂತುಬಿಟ್ಟಿದೆ. ಆದರೆ ಅದೇ ಜೈಲು ಸ್ವತಂತ್ರವಾಗಿ ಜೀವಿಸುವುದನ್ನು ಕಲಿಸುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಹುಟ್ಟಿದ ಊರು ಬಿಟ್ಟು ಶಿಕ್ಷಣಕ್ಕಾಗಿ ಹಾಸ್ಟೆಲನ್ನು ಸೇರಬೇಕಾದ ಅನಿವಾರ್ಯತೆ ಬಂದೆ ಬರುತ್ತದೆ. ಮೊದಲ ಬಾರಿ ಮನೆ ಬಿಟ್ಟು ಹಾಸ್ಟೆಲ್ ಸೇರಿದಾಗ ಮನೆಯ ನೆನಪು ಕಾಡುವುದು ಸಹಜ.
ಪ್ರತಿಯೊಂದು ವಿಷಯದಲ್ಲೂ ಹೆತ್ತವರ ಮೊರೆ ಹೋಗುವ ಮಕ್ಕಳು, ಬೇರೆ ಊರಿಗೆ ಹೋಗಿ ವಾಸಿಸುತ್ತಾರೆ ಎಂದಾಗ, ತಮ್ಮ ಮಕ್ಕಳು ಹೊಸ ವ್ಯಕ್ತಿಗಳೊಂದಿಗೆ ಹೇಗೆ ಬೆರೆಯುತ್ತಾರೆ, ಅಲ್ಲಿನ ಆಹಾರ ವ್ಯವಸ್ಥೆ ಸರಿಯಾಗುವುದೋ ಇಲ್ಲವೋ ಎಂಬ ಅಂತಂಕ ಅವರ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ಆದರೆ ಒಂದಂತೂ ಸತ್ಯ ಹಾಸ್ಟೆಲ್ ನಮಗೆ ಒಂದು ಹೊಸದಾದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮಗೆ ಹೊಸ ಮಿತ್ರರನ್ನು ಅಲ್ಲದೆ ಒಂದು ಹೊಸದಾದ ಪರಿವಾರವನ್ನು ನಮಗೆ ಕಲ್ಪಿಸಿಕೊಡುತ್ತದೆ.
ಆ ಪರಿವಾರದಲ್ಲಿ ಅಕ್ಕ, ತಂಗಿ, ಅಪ್ಪ, ಅಮ್ಮ, ಅಜ್ಜಿ, ತಾತ, ಗೆಳೆಯ, ಗೆಳತಿ ಎಲ್ಲ ಪಾತ್ರವನ್ನು ನಾವೇ ನಿರ್ವಹಿಸಿ ಬಿಡುತ್ತೇವೆ. ಆ ಕುಟುಂಬದಲ್ಲಿಯೂ ಕೂಡ ಒಂದಿಷ್ಟು ಮುನಿಸು, ತರಲೆ, ಕಾಳಜಿ, ಕಲಹ ಭಿನ್ನಾಭಿಪ್ರಾಯಗಳು ಇದ್ದರೂ ಸಹ ಕೊನೆಗೆ ಎಲ್ಲರೂ ಒಂದಾಗಿ ಜೀವನವನ್ನು ನಡೆಸುತ್ತೇವೆ.
ಮನೆಯಿಂದ ಕಾಲೇಜಿಗೆ ಬರುವವರಿಗಿಂತ ಹಾಸ್ಟೆಲಿನಿಂದ ಕಾಲೇಜಿಗೆ ಪ್ರಯಾಣಿಸುವವರ ಜೀವನ ತುಂಬಾ ವಿಭಿನ್ನವಾಗಿರುತ್ತದೆ. ನಮ್ಮ ಗುರಿಯನ್ನು ತಲುಪುವಲ್ಲಿ ಸಹಕಾರಿಯಾಗುವುದಲ್ಲದೆ, ನಮ್ಮನ್ನು ಇನ್ನಷ್ಟು ಧೈರ್ಯಶಾಲಿಯಗಳನ್ನಾಗಿ ಮಾಡುವಲ್ಲಿ ಸಹಕಾರಿಯಾಗಿದೆ.
ನಮ್ಮ ಸುಖ ದುಃಖದಲ್ಲಿ ಭಾಗಿಯಾಗಿ, ನಮ್ಮನ್ನು ಹುರಿದುಂಬಿಸುವ ಕೆಲಸವನ್ನು ಮಾಡುತ್ತಾರೆ. ಹೊಸ ಪರಿಚಯ ಹಳೆಯದಾಗುತ್ತಾ ಹೋದ ಹಾಗೆ ಬಂಧ ಇನ್ನಷ್ಟು ಗಟ್ಟಿಯಾಗುತ್ತಾ ಹೋಗುತ್ತದೆ. ಹಾಸ್ಟೆಲ್ ಬದುಕು ಸಾಕಪ್ಪ ಸಾಕು ಎಂದು ಅನಿಸಿದರೂ ಮುಂದೊಂದಿನ ಆ ಬದುಕೆ ಚಂದವೆಂದು ಅನಿಸುತ್ತದೆ.
- ಲಾವಣ್ಯ ನಾಗತೀರ್ಥ
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ