ಮಂಗಳೂರು: ನಗರದ ಫಿಜಾ ಬೈ ನೆಕ್ಸಸ್ ಮಾಲ್‍ನಲ್ಲಿ ಈ ತಿಂಗಳ 13 ಮತ್ತು 14ರಂದು ಅಪೂರ್ವ ಅಂಚೆ ಚೀಟಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅಂಚೆ ಚೀಟಿ ಉತ್ಸಾಹಿಗಳು ಮತ್ತು ಸಂಗ್ರಾಹಕರು ಜತೆಯಾಗಿ ಸಂಭ್ರಮಿಸಲು ಇದು ವೇದಿಕೆಯಾಗಲಿದ್ದು, ಈ ಅಂಚೆ ಚೀಟಿಗಳ ಹಿಂದಿನ ಕಲಾತ್ಮಕತೆ ಮತ್ತು ಕಥಾನಕವನ್ನು ಅನುಭವಿಸಲು ಅನನ್ಯ ಅವಕಾಶ ಒದಗಿಸಲಿದೆ ಎಂದು ಪ್ರಕಟಣೆ ಹೇಳಿದೆ.
ದೇಶದ ಹಾಗೂ ವಿಶ್ವದ ಅಪೂರ್ವ ಹಾಗೂ ಅಮೂಲ್ಯ ಅಂಚೆಚೀಟಿಗಳನ್ನು ಒಂದೇ ಕಡೆ ನೋಡುವ ಅವಕಾಶದ ಜತೆಗೆ, ಅಂಚೆ ಚೀಟಿ ವಿನ್ಯಾಸ ಸ್ಪರ್ದೆ, ಪತ್ರ ಬರೆಯುವ ಸ್ಪರ್ಧೆಯಂಥ ವೈವಿಧ್ಯಮಯ ಚಟುವಟಿಕೆಗಳನ್ನು ಪ್ರೇಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದೆ. ನುರಿತ ಅಂಚೆ ಚೀಟಿ ಸಂಗ್ರಾಹಕರ ನೇರ ಪ್ರಾತ್ಯಕ್ಷಿಕೆಗಳು ಕೂಡಾ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದು, ಅವರ ಸಂಗ್ರಹ ತಂತ್ರಗಳು ಮತ್ತು ಕಲೆಯ ಒಳನೋಟಗಳನ್ನು ಸಂವಾದದ ಮೂಲಕ ತಿಳಿಯಲು ಕೂಡಾ ಅವಕಾಶವಿದೆ.
ಇದರ ಅಂಗವಾಗಿ ಈ ತಿಂಗಳ 5 ರಿಂದ 7ರವರೆಗೆ ಮಾಲ್‍ನಲ್ಲಿ ಆಯ್ದ ಉತ್ಪನ್ನಗಳ ಮೇಳೆ ಶೇಕಡ 50 ರಿಯಾಯ್ತಿ ನೀಡುವ ಫ್ಲಾಟ್ 50 ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ